ಆದಿಲಾಬಾದ್(ತೆಲಂಗಾಣ):ಸಂಚಾರಿ ಪೊಲೀಸರ ಕಿರಿಕಿರಿಯಿಂದ ಬೈಕ್ ಸವಾರರು ಮೇಲಿಂದ ಮೇಲೆ ತೊಂದರೆ ಅನುಭವಿಸುತ್ತಿರುತ್ತಾರೆ. ಹೀಗಾಗಿ, ಕೆಲವೊಮ್ಮೆ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾದ ಪರಿಸ್ಥಿತಿ ಸಹ ನಿರ್ಮಾಣವಾಗಿ ಬಿಡುತ್ತದೆ. ಸದ್ಯ ತೆಲಂಗಾಣದ ಆದಿಲಾಬಾದ್‌ನಲ್ಲಿ ಅಂತಹದೊಂದು ಘಟನೆ ನಡೆದಿದೆ. ದಂಡ ಕಟ್ಟಲು ವಿಫಲವಾದ ಬೈಕ್ ಸವಾರನೋರ್ವ ಅದಕ್ಕೆ ಬೆಂಕಿ ಹಚ್ಚಿದ್ದಾನೆ.
ಟ್ರಾಫಿಕ್ ಪೊಲೀಸರ ನಿರ್ಧಾರದಿಂದ ಆಕ್ರೋಶಗೊಂಡು ತಾಳ್ಮೆ ಕಳೆದುಕೊಂಡಿರುವ ವ್ಯಕ್ತಿ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ತೆಲಂಗಾಣದ ಆದಿಲಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಆದಿಲಾಬಾದ್ ಸಂಚಾರಿ ಪೊಲೀಸರು ರಸ್ತೆ ಮಧ್ಯೆ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಮಖ್ಬುಲ್ ಎಂಬ ವ್ಯಕ್ತಿಯ ಬೈಕ್‌ಗೆ ಅಡ್ಡ ಹಾಕಿ ಪೇಪರ್ಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ತನ್ನೊಂದಿಗೆ ಯಾವುದೇ ರೀತಿಯ ಪೇಪರ್ ಇಲ್ಲ ಎಂದು ತಿಳಿಸಿದ್ದಾನೆ.