ಕರ್ನಾಟಕ

karnataka

ETV Bharat / bharat

ಮನೆಯಲ್ಲಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ: ತಾಯಿ, ಪತ್ನಿ, ಇಬ್ಬರು ಮಕ್ಕಳಿಗೂ ಹಬ್ಬಿದ ಅಗ್ನಿ - ಬೆಂಕಿ

ದೆಹಲಿಯಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಬೆಂಕಿ ನಂದಿಸಲು ಹೋದ ಕುಟುಂಬಸ್ಥರು ಕೂಡ ಗಾಯಗೊಂಡಿರುವ ಘಟನೆ ಜರುಗಿದೆ.

man-self-immolates-at-home-in-south-delhi-five-of-family-injured
Eಮನೆಯಲ್ಲಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ: ತಾಯಿ, ಪತ್ನಿ, ಇಬ್ಬರು ಮಕ್ಕಳಿಗೆ ಹಬ್ಬಿದ ಅಗ್ನಿ

By

Published : Dec 17, 2022, 6:18 PM IST

ನವದೆಹಲಿ: ಮನೆಯಲ್ಲೇ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮನೆಯಲ್ಲಿದ್ದ ಎಂಟು ತಿಂಗಳು ಮಗು ಸೇರಿ ಇತರ ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಫತೇಪುರ್ ಬೇರಿ ಪ್ರದೇಶದಲ್ಲಿ ನಡೆದಿದೆ.

35 ವರ್ಷದ ಅಭಿನಯ್ ಗುಪ್ತಾ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪತ್ನಿ ನೇಹಾ ಗುಪ್ತಾ, ತಾಯಿ ಪ್ರಶೀಲಾ ಗುಪ್ತಾ ಮತ್ತು ಇಬ್ಬರು ಮಕ್ಕಳಾದ 6 ವರ್ಷದ ರಿಹಾನ್ ಮತ್ತು ಎಂಟು ತಿಂಗಳ ವಯಸ್ಸಿನ ಶಿವಾಂಶ್ ಸಹ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಮನೆಯಲ್ಲಿ ಕುಟುಂಬ ಸದಸ್ಯರು ಮತ್ತು ಅಭಿನಯ್ ನಡುವೆ ವಾಗ್ವಾದ ನಡೆದಿದೆ. ನಂತರ ಮನೆಯಲ್ಲೇ ಅಭಿನಯ್​ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವೇಳೆ, ಬೆಂಕಿ ನಂದಿಸಲು ಕುಟುಂಬದ ಸದಸ್ಯರು ಯತ್ನಿಸಿದ್ದಾರೆ. ಆಗ ಅವರಿಗೂ ಬೆಂಕಿ ಹಬ್ಬಿ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಬಗ್ಗೆ ಸ್ಥಳೀಯರು ಗಮನಿಸಿ ಪೊಲೀಸ್ ಕಂಟ್ರೋಲ್​ ರೂಮ್​ಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ರಕ್ಷಣೆ ಮಾಡಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಭಿನಯ್​ಗೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ. ಜೊತೆಗೆ ಅವರ ತಾಯಿ ಪ್ರಶೀಲಾ ಕೂಡ ಶೇ.20ರಷ್ಟು ಸುಟ್ಟು ಗಾಯಗೊಂಡಿದ್ದಾರೆ. ಇವರನ್ನು ಏಮ್ಸ್‌ನ ಬರ್ನ್​ ವಾರ್ಡ್‌ಗೆ ದಾಖಲಿಸಲಾಗಿದೆ ಮತ್ತು ಉಳಿದ ಮೂವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ನೇಹಾ ಮತ್ತು ಇಬ್ಬರು ಮಕ್ಕಳಿಗೆ ಕೈ ಮತ್ತು ಕಾಲುಗಳಲ್ಲಿ ಸಣ್ಣ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

ABOUT THE AUTHOR

...view details