ಕರ್ನಾಟಕ

karnataka

ETV Bharat / bharat

ಪತ್ನಿಯನ್ನ ಮನಸಾರೆ ಪ್ರೀತಿಸ್ತೀನಿ ಅಂದಿದ್ದೇ ತಪ್ಪಾಯ್ತಾ..? ಯಾರಿಗೂ ಬೇಡಪ್ಪ ಇಂಥ ದುರ್ಗತಿ..! - ಪತಿಗೆ ಚಾಕುವಿನಿಂದ ಇರಿಯಲು ಮುಂದಾದ ಪತಿ

ದಯವಿಟ್ಟು ನನ್ನ ಕಾಪಾಡಿ, ಅವಳಿಗೆ ಹೆದರಿ ನಾನು ಓಡುತ್ತಿದ್ದೇನೆ. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದೆ. ಹಾಗಾಗಿ ಅವಳು ಚಾಕುವಿನಿಂದ ನನ್ನ ಎದೆ ಬಗೆಯಲು ಮುಂದಾಗಿದ್ದು, ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಕಂಡುಕೊಳ್ಳಲು ಮುಂದಾದಳು. ಹಾಗಾಗಿಯೇ ನಾನು ಓಡಿಹೋಗುತ್ತಿದ್ದೇನೆ’ ಎಂದು ವ್ಯಕ್ತಿಯೊಬ್ಬ ಅಳಲನ್ನು ತೋಡಿಕೊಂಡಿದ್ದಾನೆ.

ಯಾರಿಗೂ ಬೇಡಪ್ಪ ಇಂಥ ದುರ್ಗತಿ
ಯಾರಿಗೂ ಬೇಡಪ್ಪ ಇಂಥ ದುರ್ಗತಿ

By

Published : Jun 18, 2021, 6:55 PM IST

ಆಗ್ರಾ: ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಭಾವನಾತ್ಮಕ ವಿಡಿಯೋಗಳಿದ್ದರೆ, ಇನ್ನೂ ಕೆಲವೊಮ್ಮೆ ಹೊಟ್ಟಿ ಉಣ್ಣಾಗಿಸುವಂತೆ ನಗಿಸುವ ವಿಡಿಯೋ ತುಣುಕುಗಳು ಇರುತ್ತವೆ. ಆದರೆ, ಇಲ್ಲಿ ಒಂದು ವಿಡಿಯೋ ನೋಡಿದ್ರೆ ನಗ್ಬೇಕೋ, ಅಳ್ಬೇಕೋ ಅನ್ನೋದು ಕೂಡ ಕನ್ಫ್ಯೂಸ್​ ಆಗಿ ಬಿಡುತ್ತೆ.

ಹೌದು, ಗಂಡ-ಹೆಂಡತಿ ಮಧ್ಯೆ ಜಗಳವಾಗಿ ವ್ಯಕ್ತಿಯೊಬ್ಬ ಪತ್ನಿಗೆ ಹೆದರಿ ಹೆದ್ದಾರಿಯಲ್ಲಿ ಅಳುತ್ತಾ ಓಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗ್ರಾ ಜಿಲ್ಲೆಯ ಹೆದ್ದಾರಿಯಲ್ಲಿ ಓಡುತ್ತಿರುವ ವ್ಯಕ್ತಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಅವನು ‘ದಯವಿಟ್ಟು ನನ್ನ ಪತ್ನಿಯಿಂದ ಕಾಪಾಡಿ, ಅವಳಿಗೆ ಹೆದರಿ ನಾನು ಓಡುತ್ತಿದ್ದೇನೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದೆ.

ಹಾಗಾಗಿ ಅವಳು ಚಾಕುವಿನಿಂದ ನನ್ನ ಎದೆ ಬಗೆಯಲು ಮುಂದಾಗಿದ್ದು, ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಕಂಡು ಕೊಳ್ಳಲು ಮುಂದಾದಳು. ಹಾಗಾಗಿಯೇ ನಾನು ಓಡಿಹೋಗುತ್ತಿದ್ದೇನೆ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪತ್ನಿಗೆ ಹೆದರಿ ಓಡಿ ಹೋಗುತ್ತಿರುವ ಪತಿ

ಈ ವಿಡಿಯೋವನ್ನು ಟ್ವಿಟ್ಟರ್​​ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೆ 8,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. 600 ಕ್ಕೂ ಹೆಚ್ಚು ಜನರು ಇಷ್ಟಪಟ್ಟು, ಕಾಮೆಂಟ್​ ಮಾಡಿದ್ದಾರೆ. ವಿಡಿಯೋ ನೋಡಿದ ಬಹುತೇಕರು ಕಾಮಿಡಿ ಎಂದು ಬರೆದಿದ್ದಾರೆ. ಈ ವಿಡಿಯೋದಲ್ಲಿರುವ ವ್ಯಕ್ತಿಯ ಹೆಸರು ವಿಕಾಸ್ ಪಾಂಡೆಯಾಗಿದ್ದು, ವೈರಲ್ ವಿಡಿಯೋ ಸತ್ಯಾಸತ್ಯತೆ ಕಂಡುಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದು, ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details