ಶಿವಪುರಿ (ಮಧ್ಯ ಪ್ರದೇಶ):ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 9 ಸಾವಿರ ಪುಟಗಳ ದಾಖಲೆಗಳನ್ನು ನೀಡಲಾಗಿದೆ. ಇದಕ್ಕಾಗಿ ಆತ ಪಾವತಿಸಿದ ಶುಲ್ಕ 25 ಸಾವಿರ ರೂಪಾಯಿ. ಇನ್ನು ಈ ದಾಖಲೆಗಳನ್ನು ಆತ ಚಕ್ಕಡಿ ಗಾಡಿಯಲ್ಲಿ ತೆಗೆದುಕೊಂಡು ಹೋಗಿರುವುದು ಇನ್ನೊಂದು ವೈಶಿಷ್ಟ್ಯ.
ಆರ್ಟಿಐ ಕಾರ್ಯಕರ್ತ ಮಾಖನ್ ಧಾಕಡ್ ಎಂಬಾತ ಪ್ರಧಾನಮಂತ್ರಿ ಆವಾಸ್, ಸಂಬಲ್ ಯೋಜನೆ ಮತ್ತು ನಿರ್ಮಾಣ ಕಾರ್ಯದಲ್ಲಿ ಪಾವತಿ, ಸ್ವಚ್ಛತಾ ಮಿಷನ್ ಅಡಿಯಲ್ಲಿ ನಗರಸಭೆ ಖರೀದಿಸಿದ ವಸ್ತುಗಳ ಬಗ್ಗೆ ಮಾಹಿತಿ ಕೇಳಿದ್ದ. ಆದರೆ ಆತನಿಗೆ ಮಾಹಿತಿ ನೀಡಲಾಗಿರಲಿಲ್ಲ. ಇದಕ್ಕಾಗಿ ಅವರು ಗ್ವಾಲಿಯರ್ನಿಂದ ಭೋಪಾಲದವರೆಗೆ ಅಪೀಲು ಅರ್ಜಿಗಳನ್ನು ಸಲ್ಲಿಸಿದ್ದರು. ಕೊನೆಗೂ ಅವರಿಗೆ ಬೇಕಿದ್ದ ಮಾಹಿತಿ ಸಿಕ್ಕಿದ್ದು, ಇದಕ್ಕಾಗಿ ಅವರು 25 ಸಾವಿರ ರೂಪಾಯಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ. ತಮ್ಮ ಬಳಿ ಅಷ್ಟು ದುಡ್ಡಿಲ್ಲದಿದ್ದರೂ ಎಲ್ಲಿಂದಲೋ ಸಾಲ ಮಾಡಿತಂದು ಹಣ ಕಟ್ಟಿದ್ದಾರೆ.