ಕರ್ನಾಟಕ

karnataka

ETV Bharat / bharat

ಬುಡಕಟ್ಟು ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಕಾಮುಕ - ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ

ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆಯೋರ್ವಳ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದು, ಆಕೆಯ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Man raped women
Man raped women

By

Published : May 11, 2022, 3:56 PM IST

Updated : May 12, 2022, 2:29 PM IST

ಯಾದಾದ್ರಿ(ತೆಲಂಗಾಣ): ಬುಡಕಟ್ಟು ಜನಾಂಗದ ವಿವಾಹಿತ ಮಹಿಳೆಯೋರ್ವಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ವೆಸಗಿ, ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯಾದಾದ್ರಿ ಜಿಲ್ಲೆಯಲ್ಲಿ ದಂಪತಿಯೊಬ್ಬರು ವಾಸವಾಗಿದ್ದು, ಇಲ್ಲಿನ ಕಾಲೇಜ್​​ವೊಂದರಲ್ಲಿ ಸೆಕ್ಯುರಿಟಿ ಗಾರ್ಡ್​​ ಆಗಿ ಕೆಲಸ ಮಾಡ್ತಿದ್ದರು. ಮೇ. 9ರಂದು ಕೆಲಸದ ನಿಮಿತ್ತ ಹೊರಗಡೆ ಹೋದಾಗ ಯುವಕನೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಕೆಲಸ ಮುಗಿಸಿ ವಾಪಸ್ ಮನೆಗೆ ಬಂದ ಗಂಡನಿಗೆ ತನ್ನ ಹೆಂಡತಿ ಕಾಣದ ಕಾರಣ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದನು. ಈ ವೇಳೆ, ಮನೆಯ ಪಕ್ಕದ ಹುಲ್ಲಿನ ಬಣವೆ ಬಳಿ ರಕ್ತದ ಮಡುವಿನಲ್ಲಿ ತನ್ನ ಹೆಂಡ್ತಿಯ ಶವ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಮದುವೆಗೆ ಎರಡು ದಿನ ಬಾಕಿ.. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಸಿಕ್ಕಿಬಿದ್ದ ವಾಯುಸೇನೆ ನೌಕರ

ಎಸಿಪಿ ಉದಯ್ ರೆಡ್ಡಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿ​ ಕಟ್ಟಡ ನಿರ್ಮಾಣದ ದಿನಗೂಲಿ ಕೆಲಸ ಮಾಡುತ್ತಿದ್ದನು. ಕಳೆದ ಕೆಲ ದಿನಗಳ ಹಿಂದೆ ದಂಪತಿ ವಾಸವಿದ್ದ ಮನೆಯ ಪಕ್ಕದಲ್ಲೇ ಡೈರಿ ಉತ್ಪನ್ನಗಳ ಕಂಪನಿಯಲ್ಲಿ ಆರೋಪಿ ಕೆಲಸ ಮಾಡಲು ಆರಂಭಿಸಿದ್ದನು. ಈ ವೇಳೆ ಮಹಿಳೆ ಮೇಲೆ ಆರೋಪಿ ಕಣ್ಣಿಟ್ಟಿದ್ದನು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮನೆಯಲ್ಲಿ ಮಹಿಳೆ ಒಬ್ಬಳೇ ಇರುವುದನ್ನ ಆರೋಪಿ ಗಮನಿಸಿದ್ದಾನೆ.

ಮೇ. 9ರಂದು ಮಹಿಳೆ ವಾಶ್​ರೂಮ್​​ ಬಳಸಲು ಹೊರಗಡೆ ಹೋದಾಗ ಆರೋಪಿ ಅಲ್ಲಿಗೆ ತೆರಳಿ, ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕಿರುಚಾಡಿದ್ದಾಳೆ. ಇದರಿಂದ ಗಾಬರಿಗೊಂಡ ಆರೋಪಿ ಕಟ್ಟಿಗೆಯಿಂದ ಮಹಿಳೆ ತಲೆಯ ಮೇಲೆ ಹಲ್ಲೆ ಮಾಡಿ, ದುಷ್ಕೃತ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪತಿಗೆ ಹೇಳುವುದಾಗಿ ಸಂತ್ರಸ್ತೆ ಆರೋಪಿಗೆ ಹೇಳಿಕೊಂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿ​​ ಆಕೆಯ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿ, ಕೊರಳಿನಲ್ಲಿರುವ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ಹಲ್ಲೆಯಿಂದಾಗಿ ಅಧಿಕ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

Last Updated : May 12, 2022, 2:29 PM IST

ABOUT THE AUTHOR

...view details