ಮೀರತ್ (ಉತ್ತರಪ್ರದೇಶ):ಎರಡು ದಿನಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದಾಗ ಮಗುವನ್ನು ವ್ಯಕ್ತಿಯೊಬ್ಬ ಹೊತ್ತೊಯ್ದಿದ್ದರು. ಇದೀಗ ಅಂಥದ್ದೇ ಕೃತ್ಯ ಉತ್ತರಪ್ರದೇಶದ ಮೀತರ್ನ ಆಸ್ಪತ್ರೆಯಲ್ಲಿ ನಡೆದಿದೆ. ನವಜಾತ ಮಗುವಿಗೆ ಚುಚ್ಚುಮದ್ದು ಹಾಕಿಸಬೇಕು ಎಂದು ಹೇಳಿ ಯುವಕನೊಬ್ಬ ತಾಯಿಯಿಂದ ಮಗುವನ್ನು ಪಡೆದು ಕದ್ದೊಯ್ದಿದ್ದಾನೆ. ಮೀರತ್ ಆಸ್ಪತ್ರೆಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಮೀರತ್ನ ಮೆಡಿಕಲ್ ಕಾಲೇಜಿನಲ್ಲಿ ಮಹಿಳೆಯೊಬ್ಬರು ನವಜಾತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೆಲ ಸಮಯದ ಬಳಿಕ ತಾಯಿ - ಮಗುವನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಯುವಕನೊಬ್ಬ ಆ ಕುಟುಂಬಸ್ಥರ ಜೊತೆ ಪರಿಚಯ ಬೆಳೆಸಿಕೊಂಡಿದ್ದಾನೆ.
ಸ್ವಲ್ಪ ಸಮಯದ ಬಳಿಕ ಆ ಯುವಕ ವೈದ್ಯರು ಮಗುವಿಗೆ ಚುಚ್ಚುಮದ್ದು ಹಾಕಿಸಲು ಕರೆದಿದ್ದಾರೆ ಎಂದು ತಾಯಿಯಿಂದ ಮಗುವನ್ನು ಪಡೆದುಕೊಂಡಿದ್ದಾರೆ. ಅಲ್ಲಿಂದ ನಿಧಾನವಾಗಿ ಯಾರಿಗೂ ಗೊತ್ತಾಗದ ಹಾಗೆ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕದ್ದೊಯ್ದಿದ್ದಾನೆ.