ಅಯೋಧ್ಯೆ(ಉತ್ತರ ಪ್ರದೇಶ): ದೇವಸ್ಥಾನದಲ್ಲಿ ಮಲಗಿದ್ದ ಪಂಕಜ್ ಶುಕ್ಲಾ ಎಂಬ ಯುವಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ದೇವಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಭುವಾಪುರ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಈ ಪ್ರಕರಣ ನಡೆದಿದೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿ, ಸ್ಥಳಕ್ಕೆ ಧಾವಿಸಿ ಪರಿಶೀಲನೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪಂಕಜ್ ಶುಕ್ಲಾ ಅಮೇಥಿ ಜಿಲ್ಲೆಯ ನಿವಾಸಿ ರಾಜ್ ನಾರಾಯಣ್ ಶುಕ್ಲಾ ಅವರ ಪುತ್ರನಾಗಿದ್ದು, ಕಳೆದ ಎರಡು ತಿಂಗಳಿನಿಂದ ತನ್ನ ತಾಯಿಯ ಚಿಕ್ಕಪ್ಪ ಶ್ಯಾಮ್ ನಾರಾಯಣ ಮಿಶ್ರಾ ಅವರೊಂದಿಗೆ ವಾಸಿಸುತ್ತಿದ್ದ. ಆ ವೇಳೆ ಮನೆ ಸಮೀಪದ ದೇವಾಲಯದಲ್ಲಿ ರಾತ್ರಿ ಮಲಗಿದ್ದ ವೇಳೆ ಕತ್ತು ಸೀಳಿ ಹಂತಕರು ಕೊಂದಿದ್ದಾರೆ.