ಕರ್ನಾಟಕ

karnataka

ETV Bharat / bharat

ಬಳಸಿದ ಸಿರಿಂಜ್​, ಪಾಪಾಸುಕಳ್ಳಿಯಿಂದ 'ಲಿಪ್​​ಸ್ಟಿಕ್​​' ತಯಾರಿಸಿದ ವ್ಯಕ್ತಿ.. 60 ಲಕ್ಷ ಜನರಿಂದ ವಿಡಿಯೋ ವೀಕ್ಷಣೆ! - ಲಿಪಿಸ್ಟಿಕ್ಸ್ ತಯಾರಿಸಿದ ವ್ಯಕ್ತಿ

ವ್ಯಕ್ತಿಯೋರ್ವ ಮನೆಯಲ್ಲಿ ತಯಾರಿಸಿರುವ ಲಿಪ್ಸ್ಟಿಕ್​​ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 60 ಲಕ್ಷ ಜನರಿಂದ ವೀಕ್ಷಣೆಯಾಗಿದೆ.

Man makes lipstick with used syringes
Man makes lipstick with used syringes

By

Published : Jul 14, 2022, 8:29 PM IST

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಒಂದಿಲ್ಲೊಂದು ಆಸಕ್ತಿದಾಯಕ ವಿಡಿಯೋ ವೈರಲ್​ ಆಗ್ತಿರುತ್ತವೆ. ಸದ್ಯ ಅಂತಹ ಮತ್ತೊಂದು ವಿಡಿಯೋ ವೈರಲ್​ ಆಗಿದೆ. ವ್ಯಕ್ತಿಯೊಬ್ಬ ಮನುಷ್ಯರು ಬಳಕೆ ಮಾಡಿರುವ ಸಿರಿಂಜ್​ ಹಾಗೂ ಪಾಪಾಸುಕಳ್ಳಿ ಬಳಕೆ ಮಾಡಿ ಲಿಪ್ಸ್ಟಿಕ್​ ತಯಾರಿಸಿದ್ದಾನೆ. ಈ ವಿಡಿಯೋ ಇಂಟರ್​​ನೆಟ್​​ನಲ್ಲಿ ವೈರಲ್​ ಆಗ್ತಿದ್ದಂತೆ ಕೆಲವೇ ಗಂಟೆಗಳಲ್ಲಿ 60 ಲಕ್ಷ ಜನರಿಂದ ವೀಕ್ಷಣೆಯಾಗಿದೆ. ಈ ವಿಡಿಯೋ ಯಾವ ಪ್ರದೇಶದ್ದು ಎಂಬುದರ ಬಗ್ಗೆ ಯಾವುದೇ ರೀತಿಯ ಖಚಿತತೆ ಇಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ವ್ಯಕ್ತಿಯೊಬ್ಬ ಬಳಕೆ ಮಾಡಿರುವ ಸಿರಿಂಜ್​​ಗಳು, ಪಾಪಾಸುಕಳ್ಳಿ ಮತ್ತು ಎಣ್ಣೆಯಿಂದ ಕೆಂಪು ಬಣ್ಣದ ಲಿಪ್ಸ್ಟಿಕ್​ ತಯಾರಿಸಿದ್ದಾನೆ. ಇದರ ವಿಡಿಯೋ ಸ್ಕ್ರೀಮರ್ ಜಿಮ್​ ಎಂಬುವವರ ಟ್ವೀಟರ್ ಪೇಜ್​​ನಲ್ಲಿ ಪೋಸ್ಟ್ ಮಾಡಲಾಗಿದೆ. ವ್ಯಕ್ತಿಯೋರ್ವ ಲಿಪ್ಸ್ಟಿಕ್ ತಯಾರಿಸಲು ಸಿರಿಂಜ್​ಗಳ ಮುಂದಿನ ಭಾಗ ಕತ್ತರಿಸಿದ್ದಾನೆ. ಪಾಪಾಸುಕಳ್ಳಿಗಳನ್ನ ಬಿಸಿಲಿನಲ್ಲಿ ಒಣಗಿಸಿದ್ದಾನೆ. ಅವುಗಳಿಂದ ಬಂದ ಕೋಚಿನಿಯಲ್​​ ಕೆಂಪು ಬಣ್ಣವಾಗಿ ಬಳಕೆ ಮಾಡಿದ್ದಾನೆ. ಅದನ್ನ ಎಣ್ಣೆ ಮತ್ತು ನೀರಿನಲ್ಲಿ ಕುದಿಸಿದ್ದಾನೆ. ಅದರಿಂದ ಬಂದಿರುವ ಕೆಂಪು ದ್ರವ ಸಿರಿಂಜ್​ಗಳಲ್ಲಿ ಹಾಕಿದ್ದಾನೆ. ತದನಂತರ ಅದನ್ನ ತನ್ನ ತುಟಿಗಳಿಗೆ ಹಚ್ಚಿಕೊಂಡಿದ್ದಾನೆ.

ಆನ್​ಲೈನ್​​ನಲ್ಲಿ ಈ ವಿಡಿಯೋ ವೈರಲ್​​ ಆಗ್ತಿದ್ದಂತೆ ಬರೋಬ್ಬರಿ 60 ಲಕ್ಷ ಜನರು ಇದರ ವೀಕ್ಷಣೆ ಮಾಡಿದ್ದು, ತರಹೇವಾರಿ ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details