ಕರ್ನಾಟಕ

karnataka

ETV Bharat / bharat

ಪತ್ನಿಯ ತಲೆ ಕಡಿದು, ರುಂಡದೊಂದಿಗೆ 12 ಕಿ.ಮೀ ನಡೆದು ಪೊಲೀಸ್ ಠಾಣೆಗೆ ಬಂದ ಪತಿ! - ಒಡಿಶಾ ಕ್ರೈಂ ನ್ಯೂಸ್​

ಕಟ್ಟಿಕೊಂಡ ಹೆಂಡತಿಯ ಶಿರಚ್ಛೇದ ಮಾಡಿರುವ ವ್ಯಕ್ತಿಯೊಬ್ಬ ಅದರೊಂದಿಗೆ 12 ಕಿಲೋ ಮೀಟರ್ ನಡೆದು, ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ.

Man kills wife in Odisha
Man kills wife in Odisha

By

Published : Jul 15, 2022, 4:08 PM IST

Updated : Jul 15, 2022, 4:31 PM IST

ಧೆಂಕನಕಲ್​(ಒಡಿಶಾ):ಕಟ್ಟಿಕೊಂಡ ಹೆಂಡತಿ ಶಿರಚ್ಛೇದ ಮಾಡಿರುವ ಗಂಡ, ಆಕೆಯ ರುಂಡದೊಂದಿಗೆ ಸುಮಾರು 12 ಕಿಲೋ ಮೀಟರ್ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ಒಡಿಶಾದ ಧೆಂಕನಕಲ್​ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ತುಂಡರಿಸಿದ ತಲೆಯೊಂದಿಗೆ ಸಮೀಪದ ಪೊಲೀಸ್ ಠಾಣೆಗೆ ತೆರಳುತ್ತಿರುವ ವ್ಯಕ್ತಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಮೃತ ಮಹಿಳೆಯನ್ನ ಶುಚಲಾ ಮಾಝಿ ಎಂದು ಗುರುತಿಸಲಾಗಿದೆ. ಕಟ್ಟಿಕೊಂಡ ಹೆಂಡತಿ ತನಗೆ ವಿಶ್ವಾಸದ್ರೋಹ ಮಾಡಿದ್ದಾಳೆಂದು ಶಂಕಿಸಿ, ಅವರ ಶಿರಚ್ಛೇದ ಮಾಡಿದ್ದಾನೆಂದು ಹೇಳಲಾಗ್ತಿದೆ.

ಪತ್ನಿಯ ತಲೆ ಕಡಿದು, ರುಂಡದೊಂದಿಗೆ 12 ಕಿ.ಮೀ ನಡೆದು ಪೊಲೀಸ್ ಠಾಣೆಗೆ ಬಂದ ಪತಿ!

ಆತನನ್ನ ಗುರುತಿಸಿರುವ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಆತನನ್ನ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿರಿ:‘ನಾನು ವಿಶ್ವಾಸದ್ರೋಹಿ ಅಲ್ಲ’ ಕೈ ಮೇಲೆ ಸೊಸೈಡ್​ ನೋಟ್​ ಬರೆದುಕೊಂಡು ಮಹಿಳೆ ಆತ್ಮಹತ್ಯೆ!

Last Updated : Jul 15, 2022, 4:31 PM IST

ABOUT THE AUTHOR

...view details