ಭಿಲಾಯ್ :ಕೌಟುಂಬಿಕ ಕಲಹದ ಹಿನ್ನೆಲೆ ಹೆಂಡತಿಯನ್ನು ರಾಡಿನಿಂದ ಹೊಡೆದು ಕೊಂದು ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಮಧ್ಯಪ್ರದೇಶದ ಭಿಲಾಯ್ನಲ್ಲಿ ನಡೆದಿದೆ.
ಪತ್ನಿಯನ್ನು ಕೊಂದ ಪತಿ ಆತ್ಮಹತ್ಯೆಗೆ ಯತ್ನ ಮೂಲಗಳ ಪ್ರಕಾರ ರಾಜ್‌ಕುಮಾರ್ ಪಟೇಲ್ (40) ತನ್ನ ಹೆಂಡತಿ ಅನಿತಾ ಪಟೇಲ್ (35) ಜೊತೆ ಪ್ರತಿದಿನ ಕ್ಷುಲ್ಲಕ ಕಾರಣಗಳಿಗಾಗಿ ಜಗಳ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಶನಿವಾರ ಬೆಳಗ್ಗೆ ಕೂಡ ಯಾವುದೋ ಕಾರಣಕ್ಕಾಗಿ ದಂಪತಿ ನಡುವೆ ಆರಂಭವಾದ ಜಗಳ ತಾರಕಕ್ಕೇರಿದ್ದು, ಆರೋಪಿ ರಾಜ್‌ಕುಮಾರ್ ಕಬ್ಬಿಣದ ಸಲಾಕೆಯಿಂದ ಬಲವಾಗಿ ಹೊಡೆದು ಕೊಂದಿದ್ದಾನೆ.
ನಂತರ ತಾನೂ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ಗಮನಿಸಿದ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆರೋಪಿ ರಾಜ್‌ಕುಮಾರ್ ತನ್ನ ಹೆಂಡತಿ ಬಳಿ 50 ರೂ. ಕೊಡು ಎಂದು ಕೇಳಿದ್ದಾನೆ.
ಆದರೆ, ಆಕೆ ಹಣ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ ಅನಿತಾಳನ್ನು ಕಬ್ಬಿಣದ ರಾಡ್‌ನಿಂದ ಸಾಯುವಂತೆ ಹೊಡೆದಿದ್ದಾನೆ. ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದಾನೆ.
ಆದರೆ, ಇದನ್ನು ಗಮನಿಸಿದ ಪಕ್ಕದ ಮನೆಯವರು ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ರಾಜ್‌ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪಿಎಸ್ ಸಿಎಸ್‌ಪಿ ವಿಶ್ವಾಸ್ ಚಂದ್ರಕರ್ ಮಾಹಿತಿ ನೀಡಿದ್ದಾರೆ. ಇನ್ನು, ಘಟನೆ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ:ಗೂಳಿಕಾಳಗದಲ್ಲಿ ಗೂಳಿ ಸಾವು.. ಇಬ್ಬರು ಅರೆಸ್ಟ್