ಇಂದೋರ್(ಮಧ್ಯಪ್ರದೇಶ): ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕಾಗಿ 20 ವರ್ಷದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಂದೋರ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ:ಇವರಿಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ದಿನ ಕಳೆದಂತೆ ಈ ಜೋಡಿಯ ಮಧ್ಯೆ ಸ್ನೇಹ ಬೆಳೆದಿತ್ತು. ನಂತರ, ನಗರದ ಬಾಡಿಗೆ ಮನೆ ಪಡೆದುಕೊಂಡು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 7ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಗೆಳತಿಯನ್ನು ಗೆಳೆಯನೊಬ್ಬ ಹತ್ಯೆ ಮಾಡಿದ್ದನು. ನಂತರ ಡಿಸೆಂಬರ್ 9ರಂದು ಪೊಲೀಸರು ಆಕೆಯ ಮೃತದೇಹವನ್ನು ವಶಪಡಿಸಿಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಮಾಹಿತಿ ನೀಡಿದ್ದಾರೆ.
''ಆರೋಪಿ ಪ್ರವೀಣ್ ಸಿಂಗ್ ಧಾಕಡ್ (24) ಮೂಲತಃ ಗುಣಾ ಜಿಲ್ಲೆಯ ನಿವಾಸಿಯಾಗಿದ್ದು, ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದಾಗ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಕತ್ತರಿ ಇರಿತದಿಂದ ತೀವ್ರ ರಕ್ತಸ್ರಾವವಾಗಿರುವ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ'' ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತರು ಮಾಹಿತಿ ಒದಗಿಸಿದ್ದಾರೆ.