ಸಿದ್ದಿಪೇಟ್, ತೆಲಂಗಾಣ :ಪತ್ನಿಯೊಂದಿಗೆ ಜಗಳವಾಡಿದ ಪತಿ ತನ್ನ 11 ತಿಂಗಳ ಹೆಣ್ಣು ಮಗುವಿಗೆ ವಿದ್ಯುತ್ ಹರಿಸಿ ಕೊಂದಿರುವ ಅಮಾನವೀಯ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಸಿದ್ದಿಪೇಟ್ ಜಿಲ್ಲೆಯ ವೆಂಕಟರಾವುಪೇಟ ಎಂಬಲ್ಲಿ ಈ ಘಟನೆ ನಡೆದಿದೆ. ರಾಜಶೇಖರ ಎಂಬಾತ ತನ್ನ ಪತ್ನಿ ಸುನೀತಾಳೊಂದಿಗೆ ಜಗಳವಾಡಿದ ನಂತರ ಮಗುವನ್ನು ಹೊಲಕ್ಕೆ ಎತ್ತೊಯ್ದು ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ. ಇದಷ್ಟೇ ಅಲ್ಲದೇ ಕೀಟನಾಶಕ ಸೇವಿಸಿ, ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾನೆ.