ಖರ್ದಹ (ಉತ್ತರ 24 ಪರಗಣ ಜಿಲ್ಲೆ): ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ವಿಧಾನಸಭೆ ಚುನಾವಣೆಗೆ ಕೆಲದಿನಗಳು ಬಾಕಿ ಇರುವಾಗ ಉತ್ತರ 24 ಪರಗಣ ಜಿಲ್ಲೆಯ ಖರ್ದಹದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಪಶ್ಚಿಮ ಬಂಗಾಳದ ಖರ್ದಹದಲ್ಲಿ ಬಾಂಬ್ ಸ್ಫೋಟ, ಓರ್ವ ಸಾವು
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಖರ್ದಹದಲ್ಲಿ ಬಾಂಬ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕೊಲ್ಕತ್ತಾಗೆ ಕರೆದೊಯ್ಯಲಾಗಿದೆ. ಈ ಸ್ಫೋಟವು ಬಾಂಬ್ ತಯಾರಿಕೆಯ ಪ್ರಕ್ರಿಯೆಯ ವೇಳೆ ಜರುಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ.ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 5 ಹಂತದ ಮತದಾನ ಮುಕ್ತಾಯಗೊಂಡಿದೆ. ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬಿಹಾರ್ದಲ್ಲಿ ಹಿಂಸಾಚಾರ ನಡೆದಿತ್ತು. ಕೂಚ್ ಬಿಹಾರ್ ಜಿಲ್ಲೆಯ ಶೀತಲ್ಕೂಚಿಯ ಪಥಂತುಲಿ ಪ್ರದೇಶದಲ್ಲಿರುವ ಮತಗಟ್ಟೆ ಎದುರು ವೋಟ್ ಮಾಡಲು ನಿಂತಿದ್ದ ಮತದಾರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.