ಖಮ್ಮಮ್(ತೆಲಂಗಾಣ):ಕೇವಲ 100 ರೂಪಾಯಿಗಾಗಿ ಕಾರ್ಮಿಕನೋರ್ವ ತಮ್ಮ ಸ್ನೇಹಿತನನ್ನು ಕೊಲೆಗೈದ ಘಟನೆ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ಮಧ್ಯಪ್ರದೇಶದ ಬಾಲಘಡ ಜಿಲ್ಲೆಯ ಪಿಪಟೋಲಾದ ಸುಮಾರು 20 ಕಾರ್ಮಿಕರು ಹೊಟ್ಟೆಪಾಡಿಗಾಗಿ ಖಮ್ಮಮ್ ಜಿಲ್ಲೆಯ ರಘುನಾಥಪಾಲೆಂ ವಲಯದ ಎನ್ವಿ ಬಂಜಾರ ಗ್ರಾಮಕ್ಕೆ ಕೃಷಿ ಕೆಲಸಕ್ಕಾಗಿ ಬಂದಿದ್ದರು.
ನ.11 ರಂದು ದಯಾಳ್ ಮತ್ತು ಮಡಿವಿ ಸೇತುರಾಮ್ ಎಂಬ ಇಬ್ಬರು ಕಾರ್ಮಿಕರ ನಡುವೆ ವೇತನ ವಿಚಾರವಾಗಿ ವಿವಾದ ಉಂಟಾಗಿತ್ತು. ಮದ್ಯದ ಅಮಲಿನಲಿದ್ದ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ಸೇತುರಾಮ್, ತರಕಾರಿ ಕತ್ತರಿಸುವ ಚಾಕುವಿನಿಂದ ದಯಾಳ್ ಮೇಲೆ ಹಲ್ಲೆ ಮಾಡಿದ್ದನು. ಪರಿಣಾಮ ದಯಾಳ್ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ 100 ರೂ.ಗಾಗಿ ಸ್ನೇಹಿತನನ್ನು ಕೊಲೆ ಮಾಡಿದ್ದಾಗಿ ಆರೋಪಿ ಸೇತುರಾಮ್ ಒಪ್ಪಿಕೊಂಡಿದ್ದಾನೆ. ಮೃತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ದಯಾಳ್ ಪಾರ್ಥಿವ ಶರೀರವನ್ನು ಅವರ ಊರಿಗೆ ರವಾನಿಸಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ನಿಯಂತ್ರಣ ತಪ್ಪಿ ಕೋಳಿ ಅಂಗಡಿಗೆ ಗುದ್ದಿದ ಲಾರಿ: ಇಬ್ಬರು ಸ್ಥಳದಲ್ಲೇ ಸಾವು