ಅನಂತಪುರಂ/ಆಂಧ್ರಪ್ರದೇಶ: ಕೇವಲ 100 ರೂಪಾಯಿ ವಿಚಾರಕ್ಕಾಗಿ ಅಣ್ಣನನ್ನೇ ಕೊಂದ ವಿಲಕ್ಷಣ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಅಮರಪುರಂ ಮಂಡಲದಲ್ಲಿರುವ ಹೇಮಾವತಿ ಎಂಬಲ್ಲಿ ನಡೆದಿದೆ.
100 ರೂಪಾಯಿಗಾಗಿ ಅಣ್ಣನನ್ನೇ ಹತ್ಯೆ ಮಾಡಿದ ತಮ್ಮ..! - man killed his brother over 100 rs issue
ತಾಯಿ ತನ್ನ ಪಿಂಚಣಿ ಹಣದಲ್ಲಿ ತನಗಿಂತ 100 ರೂಪಾಯಿ ಹಣವನ್ನು ಅಣ್ಣನಿಗೆ ಹೆಚ್ಚಿಗೆ ನೀಡುತ್ತಾಳೆ ಎಂಬ ಕಾರಣಕ್ಕೆ ಅಸಮಾಧಾನಗೊಂಡ ತಮ್ಮನೊಬ್ಬ ಅಣ್ಣನನ್ನೇ ಹತ್ಯೆ ಮಾಡಿದ್ದಾನೆ.
ರಂಗಣ್ಣ ಎಂಬ ವ್ಯಕ್ತಿ ತನ್ನ ಅಣ್ಣ ಲಕ್ಷ್ಮಣ್ಣನನ್ನು ನೂರು ರೂಪಾಯಿಗಾಗಿ ಹತ್ಯೆ ಮಾಡಿದ್ದಾನೆ. ಇವರ ತಾಯಿಗೆ ಪಿಂಚಣಿ ಹಣ ಬರುತ್ತಿದ್ದು, ಆಕೆ ಪ್ರತೀ ತಿಂಗಳು ಹಿರಿಯ ಮಗನಿಗೆ 300 ರೂಪಾಯಿ ಮತ್ತು ರೂ. ಕಿರಿಯ ಮಗನಿಗೆ 200 ರೂ. ಕೊಡುತ್ತಾರೆ. ತನಗಿಂತ ತನ್ನ ಅಣ್ಣನಿಗೆ 100 ರೂಪಾಯಿ ಹೆಚ್ಚುವರಿಯಾಗಿ ಕೊಡುವುದಕ್ಕೆ ಕೋಪಗೊಂಡ ರಾಮಣ್ಣ ತನ್ನ ತಂದೆ- ತಾಯಿ ಮೇಲೆಯೇ ದೊಣ್ಣೆಯಿಂದ ಹಲ್ಲೆಗೆ ಆತನ ಕೋಪ ತಾರಕಕ್ಕೇರಿ ಅಣ್ಣ ಲಕ್ಷ್ಮಣ್ಣನ ಮೇಲೂ ಹಲ್ಲೆ ಮಾಡಿದ ಹಿನ್ನೆಲೆ ತೀವ್ರವಾಗಿ ಗಾಯಗೊಂಡ ಲಕ್ಷ್ಮಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಲಕ್ಷ್ಮಣ್ಣನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಅಣ್ಣನನ್ನು ಕೊಂದು ತಲೆಮರೆಸಿಕೊಂಡಿರುವ ರಾಮಣ್ಣನಿಗಾಗಿ ಶೋಧ ಮುಂದುವರಿಸಿದ್ದಾರೆ. ಮೃತ ಲಕ್ಷ್ಮಣ್ಣನಿಗೆ ಇಬ್ಬರು ಮಕ್ಕಳಿದ್ದಾರೆ.