ಕೊಚ್ಚಿ:ಫೇಸ್ಬುಕ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗುಂಪೊಂದು ಚಾಕುವಿನಿಂದ ಇರಿದು ಕೊಂದ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ. ಕೇಸ್ನಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಕೊಚ್ಚಿಯ ಸಜ್ಜನ್ ಕೊಲೆಯಾದ ವ್ಯಕ್ತಿ. ಎರಡು ಗುಂಪುಗಳ ಮಧ್ಯೆ ಈ ಹಿಂದೆಯೇ ಯಾವುದೋ ಕಾರಣಕ್ಕಾಗಿ ಹಳೆಯ ದ್ವೇಷ ಹೊಗೆಯಾಡುತ್ತಿತ್ತು. ಈ ಮಧ್ಯೆ ಸಜ್ಜನ್ ಫೇಸ್ಬುಕ್ನಲ್ಲಿ ಆಕ್ಷೇಪಾರ್ಹ ಬರಹವುಳ್ಳ ಪೋಸ್ಟ್ ಮಾಡಿದ್ದ. ಇದನ್ನು ಪ್ರಶ್ನಿಸಲು ಆಂಟೋನಿ ಮತ್ತು ಆತನ ಗ್ಯಾಂಗ್ ಸಜ್ಜನ್ ಮನೆಗೆ ಬಂದಿದೆ.
ಪೋಸ್ಟ್ ಬಗ್ಗೆ ವಾಗ್ವಾದ ನಡೆದಿದೆ. ಈ ವೇಳೆ, ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಸಜ್ಜನ್ಗೆ ಮತ್ತೊಂದು ಗುಂಪು ಚಾಕುವಿನಿಂದ ಇರಿದಿದೆ. ತೀವ್ರ ರಕ್ತಸ್ರಾವದಿಂದ ಸಜ್ಜನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ, ಎರಡೂ ಗ್ಯಾಂಗ್ನ ಸದಸ್ಯರಿಗೆ ಗಾಯಗಳಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎರಡು ಗುಂಪುಗಳ ನಡುವೆ ಹಳೆಯ ದ್ವೇಷವಿದೆ. ಇಂದು ಬೆಳಗ್ಗೆ ಸಜ್ಜನ್ ಪೋಸ್ಟ್ ಅನ್ನು ಪ್ರಶ್ನಿಸಲು ಬಂದಾಗ ಮಾರಾಮಾರಿ ನಡೆದಿದೆ. ಇದಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆ ಮಾಡಲು ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆಯೂ ಹಲವಾರು ಈ ಗುಂಪುಗಳ ಬಡಿದಾಡಿಕೊಂಡಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಓದಿ:ಫುಡ್ ಡೆಲಿವರಿಗೆ ಬಂದ ಜೊಮ್ಯಾಟೊ ಬಾಯ್.. ಯುವಕನ ಖಾಸಗಿ ಅಂಗಕ್ಕೆ ಕಚ್ಚಿತು ಶ್ವಾನ!