ಬಸ್ತಿ(ಉತ್ತರ ಪ್ರದೇಶ): ವಿವಾಹವಾಗುವುದಾಗಿ ನಂಬಿಸಿ, 200ಕ್ಕೂ ಅಧಿಕ ಯುವತಿಯರಿಗೆ ಮೋಸ ಮಾಡಿರುವ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ನಿವಾಸಿ ತರುಣ್ ಕುಮಾರ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಈತ ಆನ್ಲೈನ್ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವಿವಿಧ ರಾಜ್ಯಗಳ ಹುಡುಗಿಯರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸುತ್ತಿದ್ದ.
ಹುಡುಗಿಯರಿಗೆ ಮದುವೆಯ ಸುಳ್ಳು ಭರವಸೆ ಕೊಟ್ಟು ಅವರಿಂದಲೇ ಲಕ್ಷಾಂತರ ರೂಪಾಯಿ ದೋಚಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಬಸ್ತಿ ಜಿಲ್ಲಾ ಪೊಲೀಸರು ಮಾಹಿತಿ ನೀಡಿದರು. ತರುಣ್ ಕುಮಾರ್, ಆನ್ಲೈನ್ ಆ್ಯಪ್ನಲ್ಲಿ ತನ್ನ ಹೆಸರು ನೋಂದಣಿ ಮಾಡಿಕೊಂಡಿದ್ದು, ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ಆಮಿಷ ಒಡ್ಡುತ್ತಿದ್ದನಂತೆ.