ಮುಂಬೈ (ಮಹಾರಾಷ್ಟ್ರ) : ’ಹಲೋ, ಐ ಯಾಮ್ ಶರದ್ ಪವಾರ್’. ಹೀಗೆ ಶರದ್ ಪವಾರ್ ಧ್ವನಿ ಅನುಕರಿಸಿ ಸಿಎಂ ಉದ್ಧವ್ ಠಾಕ್ರೆಯ ಹೆಚ್ಚುವರಿ ಕಾರ್ಯದರ್ಶಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಕರೆ ಮಾಡಿದ್ದು, ಈ ಸಂಬಂಧ ಥಾಣೆಯ ಗಾವದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇಂಥ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಶರದ್ ಪವಾರ್ರಂತೆ ಕರೆ ಮಾಡಿ ಮಾತನಾಡಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಶಿಶ್ ಕುಮಾರ್ ಸಿಂಗ್ಗೆ ಶರದ್ ಪವಾರ್ ಧ್ವನಿ ಅನುಕರಿಸಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಈ ವೇಳೆ, ತಾವು ಸೂಚಿಸಿದ ಅಧಿಕಾರಿಯನ್ನು ನಿರ್ದಿಷ್ಟ ಸ್ಥಳಕ್ಕೆ ವರ್ಗಾಯಿಸಬೇಕೆಂದು ತಾಕೀತು ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಂಶಯಗೊಂಡ ಆಶಿಶ್ ಕುಮಾರ್ ಧ್ವನಿ ಮರು ಪರಿಶೀಲಿಸಿದ್ದಾರೆ. ತನಿಖೆಯ ನಂತರ ಶರದ್ ಪವಾರ್ ಅಂತಹ ಯಾವುದೇ ಕರೆ ಬಂದಿಲ್ಲ ಎಂದು ತಿಳಿದಿದೆ. ಈ ಸಂಬಂಧ ಆಶಿಶ್, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಮೋದಿ - ಶಾ ಯಾಕೆ ಉತ್ತರಿಸಲಿಲ್ಲ: ಡೆರೆಕ್ ಒಬ್ರೇನ್