ಮಯೂರ್ಭಂಜ್ (ಒಡಿಶಾ):ಆರೋಗ್ಯ ಕಾರ್ಯಕರ್ತರ ಎಡವಟ್ಟಿನಿಂದಾಗಿ ಕೋವಿಡ್ ವ್ಯಾಕ್ಸಿನೇಷನ್ ವೇಳೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಲಸಿಕೆ ಹಾಕಿರುವ ಮತ್ತೊಂದು ಪ್ರಕರಣ ಹೊರಬಂದಿದೆ. ಒಡಿಶಾದ ಮಯೂರ್ಭಂಜ್ ಜಿಲ್ಲೆಯ 51 ವರ್ಷದ ವ್ಯಕ್ತಿ ಇದೀಗ ಆತಂಕಕ್ಕೊಳಗಾಗಿದ್ದಾರೆ.
ಮಯೂರ್ಭಂಜ್ನ ರಘುಪುರ ಗ್ರಾಮದ ಪ್ರಸನ್ನ ಕುಮಾರ್ ಸಾಹು ಎಂಬವರು ಸರ್ಕಾರಿ ಪ್ರೌಢಶಾಲೆಯಲ್ಲಿನ ಲಸಿಕೆ ಪಡೆಯಲು ತೆರಳಿದ್ದರು. ಒಂದು ಬಾರಿ ಲಸಿಕೆ ಕೊಟ್ಟು ಅರ್ಧಗಂಟೆ ನಿಗಾದಲ್ಲಿರಿಸುವ ಸಲುವಾಗಿ ಆತನನ್ನು ಕೂರಿಸಲಾಗಿತ್ತು. ಆದರೆ ಈ ವೇಳೆ ನರ್ಸ್ ಮತ್ತೊಮ್ಮೆ ವ್ಯಾಕ್ಸಿನ್ ಚುಚ್ಚಿದ್ದಾರೆ. ಬಳಿಕ ಇವರನ್ನು ಮತ್ತೆ 2 ಗಂಟೆಗಳ ಕಾಲ ನಿಗಾದಲ್ಲಿರಿಸಿ, ಒಆರ್ಎಸ್(Oral Rehydration Solutions) ಕುಡಿಸಿ ಕೂರಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಖಚಿತವಾದ ಬಳಿಕ ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಮಾತಾಡ್ತಾ ಯುವತಿಗೆ ಎರಡು ಬಾರಿ ಲಸಿಕೆ ಹಾಕಿದ ನರ್ಸ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಸಿಕಾ ಕೇಂದ್ರದ ಉಸ್ತುವಾರಿ ರಾಜೇಂದ್ರ ಬೆಹೆರಾ, ಲಸಿಕೆ ಹಾಕಿಸಿಕೊಂಡ ಬಳಿಕ ಈ ವ್ಯಕ್ತಿ ವೀಕ್ಷಣಾ ಕೊಠಡಿಗೆ ಹೋಗುವ ಬದಲು ವ್ಯಾಕ್ಸಿನೇಷನ್ ಸ್ಥಳದಲ್ಲೇ ಕುಳಿತಿದ್ದಾನೆ. ಹೀಗಾಗಿ ನರ್ಸ್ಗೆ ಗೊಂದಲ ಉಂಟಾಗಿ ತಪ್ಪಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯ ಇಲಾಖೆ ಎಡವಟ್ಟು: 15 ನಿಮಿಷದಲ್ಲೇ ಎರಡು ವ್ಯಾಕ್ಸಿನ್ ಪಡೆದ ಮಹಿಳೆ