ಅಶೋಕನಗರ(ಮಧ್ಯಪ್ರದೇಶ): ಕ್ರಿಕೆಟ್, ಕಬಡ್ಡಿ, ಫುಟ್ಬಾಲ್ ಸೇರಿದಂತೆ ತರಕಾರಿ ಮಾರುಕಟ್ಟೆಗಳಲ್ಲಿ ಹರಾಜು(ಬಿಡ್) ಕೂಗುವುದು ಸರ್ವೆ ಸಾಮಾನ್ಯ. ಆದರೆ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೇ ಮೊದಲ ಸಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ(ಸರಪಂಚ್) ಹರಾಜು ಮೂಲಕ ಆಯ್ಕೆ ಮಾಡಲಾಗಿದೆ.
ಮಧ್ಯಪ್ರದೇಶದ ಅಶೋಕನಗರದಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ಗ್ರಾಮ ಪಂಚಾಯ್ತಿ ಸರಪಂಚ್ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ವ್ಯಕ್ತಿಯೋರ್ವನ ಆಯ್ಕೆ ಮಾಡಲಾಗಿದೆ. ಈ ಹುದ್ದೆಗೆ ಆಯ್ಕೆಯಾಗಿರುವ ವ್ಯಕ್ತಿ ಬರೋಬ್ಬರಿ 44 ಲಕ್ಷ ರೂ.ನೀಡಿದ್ದು, ಗ್ರಾಮದ ದೇವಸ್ಥಾನದಲ್ಲಿ ಬಿಡ್ ನಡೆಸಲಾಗಿದೆ.
ಚಂದೇರಿ ಜಿಲ್ಲೆಯಲ್ಲಿ ಬರುವ ಭತೌಲಿ ಗ್ರಾಮದಲ್ಲಿ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಬೇಕಿದೆ. ಆದರೆ, ಗ್ರಾಮಸ್ಥರು ತಮ್ಮ ಸರಪಂಚ್ನ ಆಯ್ಕೆ ಮಾಡುವ ಉದ್ದೇಶದಿಂದ ದೇವಸ್ಥಾನದಲ್ಲಿ ಸಭೆ ಸೇರಿದ್ದರು. ಇಲ್ಲಿ ಸರಪಂಚ್ ಹುದ್ದೆಗಾಗಿ ಹರಾಜು ನಡೆಸಲಾಗಿದ್ದು, ಸೌಭಾಗ್ ಸಿಂಗ್ ಎಂಬ ವ್ಯಕ್ತಿ 44 ಲಕ್ಷ ರೂ. ನೀಡಿ ಬಿಡ್ ಖರೀದಿ ಮಾಡಿದ್ದಾರೆ.