ಫಿರೋಜಾಬಾದ್: 1974ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 80 ವರ್ಷದ ವ್ಯಕ್ತಿ ಇದೀಗ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಕರಣ ನಡೆದಿದೆ. 45 ವರ್ಷಗಳ ಹಿಂದೆ ಫಿರೋಜಾಬಾದ್ ಜಿಲ್ಲೆಯ ನರ್ಕಿ ಗ್ರಾಮದಲ್ಲಿ ಮಹಿಳೆಯೊಬ್ಬರ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆದೇಶ ನೀಡಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಪರಿಗಣಿಸಿದ್ದು, ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದರ ಹೊರತಾಗಿ 20 ಸಾವಿರ ದಂಡವನ್ನು ಕೂಡ ವಿಧಿಸಲಾಗಿದೆ. ಒಂದು ವೇಳೆ, ಅಪರಾಧಿ ಈ ದಂಡದ ಹಣವನ್ನು ಪಾವತಿ ಮಾಡುವಲ್ಲಿ ವಿಫಲರಾದರೆ ಹೆಚ್ಚುವರಿಯಾಗಿ ಮತ್ತೊಂದು ವರ್ಷ ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ತಿಳಿಸಿದೆ.
1974ರ ಹತ್ಯೆ:ಪ್ರಾಸಿಕ್ಯೂಷನ್ ಪ್ರಕಾರ, 1984 ಸೆಪ್ಟೆಂಬರ್ 14ರಂದು ಮಹೇಂದ್ರ ಸಿಂಗ್ ಎಂಬ ಆರೋಪಿ ಅದೇ ಗ್ರಾಮದ ಮಹಿಳೆಯ ಮಾತು ಕೇಳಿ, ರಾಮ್ ಬೆಟಿಯ ಗಂಡನನ್ನು ರೈಫೆಲ್ನಿಂದ ಹತ್ಯೆ ಮಾಡಿದ್ದನು. ಈ ಪ್ರಕರಣ ಸಂಬಂದ ರಾಮ್ ಬೆಟಿ ಮಗಳು ಮೀರಾ ದೇಮಿ ಮಹೇಂದ್ರ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಮಯದಲ್ಲಿ ನಾರ್ಖಿ ಆಗ್ರಾದ ಭಾಗವಾಗಿತ್ತು. ಆಗ್ರಾದ ನ್ಯಾಯಾಲಯದಲ್ಲಿ ಈ ಪ್ರಕರಣದ ಸುದೀರ್ಘ ಹೋರಾಟ ಕೂಡ ನಡೆದಿತ್ತು. ಬಳಿಕ ಈ ಪ್ರಕರಣ ಫಿರೋಜಾಬಾದ್ ಕೋರ್ಟ್ಗೆ ವರ್ಗವಾಯಿತು. ಇಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶರಾದ ಜೀತೇಂದ್ರ ಗುಪ್ತಾ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಈ ಪ್ರಕರಣದ ಪ್ರಾಸಿಕ್ಯೂಟರ್ ಆಗಿರುವ ಎಡಿಜಿಸಿ ಶ್ರೀನಾರಾಯಣ ಶರ್ಮಾ, ಪ್ರಕರಣ ಸಂಬಂಧ ಹಲವು ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅನೇಕ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಮಹೇಂದ್ರ ಸಿಂಗ್ ಅವರನ್ನು ದೋಷಿ ಎಂದು ನ್ಯಾಯಾಲಯ ತಿಳಿಸಿದೆ ಎಂದರು.