ತಿರುಪತ್ತೂರು(ತಮಿಳುನಾಡು):ಪ್ರೀತಿ - ಪ್ರೇಮದ ವಿಷಯ ನಮ್ಮ ಮುಂದೆ ಬಂದಾಗ ಅನೇಕ ಸಲ ಮಡದಿಗೋಸ್ಕರ ತಾಜ್ ಮಹಲ್ ಕಟ್ಟಿಸಿದ ಷಹಜಹಾನ್ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುತ್ತೇವೆ. ಆದರೆ, ಅನೇಕರು ಪ್ರೀತಿ ಪಾತ್ರರಿಗೆ ತಮ್ಮ ಕೈಲಾದ ಪ್ರಯತ್ನ ಮಾಡ್ತಾರೆ. ಸದ್ಯ ನಾವು ಹೇಳಲು ಹೊರಟಿರುವ ಸ್ಟೋರಿ ಕೂಡ ಅಂತಹದ್ದು.
ಮೃತ ಹೆಂಡತಿ ಮೇಲಿನ ಪ್ರೀತಿಗೋಸ್ಕರ ವ್ಯಕ್ತಿಯೋರ್ವ ಪತ್ನಿಯ ಪ್ರತಿಮೆ ನಿರ್ಮಿಸಿದ್ದಾನೆ. ತಮಿಳುನಾಡಿನ ತಿರುಪತ್ತೂರಿನಲ್ಲಿ 57 ವರ್ಷದ ಗೋವಿಂದ್ ರಾಜ್ ಈ ಕೆಲಸ ಮಾಡಿದ್ದಾನೆ. ತಿರುಪತ್ತೂರು ಜಿಲ್ಲೆಯ ಅಧಿಯೂರ್ ಗ್ರಾಮದಲ್ಲಿ ವಾಸವಾಗಿರುವ ಈ ವ್ಯಕ್ತಿ ಕಳೆದ ವರ್ಷ ತನ್ನ ಹೆಂಡತಿ ಕಳೆದುಕೊಂಡಿದ್ದು, ಅವರಿಗೋಸ್ಕರ ಇದೀಗ ಪ್ರತಿಮೆ ನಿರ್ಮಾಣ ಮಾಡಿಸಿದ್ದಾನೆ.
1985ರಲ್ಲಿ ಅಂದರೆ ಸುಮಾರು 35 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಗೋವಿಂದ್ ರಾಜ್, ಮಲಾರ್ಕೊಡಿ ಜೊತೆ ಸಪ್ತಪದಿ ತುಳಿದಿದ್ದನು. ಆದರೆ, ಕಳೆದ ವರ್ಷ ಹೃದಯಾಘಾತದಿಂದ ಹೆಂಡತಿ ಸಾವನ್ನಪ್ಪಿದ್ದಳು. ಇದೀಗ ಮೊದಲ ವರ್ಷದ ಪುಣ್ಯಸ್ಮರಣೆ ವೇಳೆಗೆ ಪ್ರತಿಮೆ ನಿರ್ಮಾಣ ಮಾಡಿಸಿದ್ದು, ಪ್ರೀತಿಗೆ ಸಾವಿಲ್ಲ ಎಂಬುದನ್ನ ಸಾಬೀತು ಮಾಡಿದ್ದಾನೆ.
ಇದನ್ನೂ ಓದಿರಿ:ಹೆಂಡತಿ ಮಡಿದರೂ ಕುಂದದ ಪ್ರೀತಿ: ಮಡದಿಯ ಪ್ರತಿಮೆ ಮಾಡಿಸಿದ ಉದ್ಯಮಿ..!
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿರುವ ಗೋವಿಂದ್ ರಾಜ್ನಿಗೆ ಕರ್ನಾಟಕದ ಮೈಸೂರಿನಲ್ಲಿನ ವ್ಯಕ್ತಿಯೊಬ್ಬ ತನ್ನ ಹೆಂಡತಿಗಾಗಿ ಪ್ರತಿಮೆ ನಿರ್ಮಾಣ ಮಾಡಿರುವುದನ್ನ ನೋಡಿ ಈ ರೀತಿಯಾಗಿ ನಡೆದುಕೊಂಡಿದ್ದಾಗಿ ಹೇಳಿದ್ದಾನೆ. ಈತನ ಕೆಲಸಕ್ಕೆ ಇದೀಗ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಉದ್ಯಮಿಯೊಬ್ಬರು ತಮ್ಮ ಮೃತ ಪತ್ನಿಯ ಪ್ರತಿಮೆ ನಿರ್ಮಾಣ ಮಾಡಿದ್ದು, ನಿತ್ಯ ಅದಕ್ಕೆ ಪೂಜೆ ಸಲ್ಲಿಸುತ್ತಾರೆ.