ಹೈದರಾಬಾದ್: ಹೈದರಾಬಾದ್‌ನ ಇಡ್ಲಿ ಪ್ರಿಯರೊಬ್ಬರು ಕಳೆದ ಒಂದು ವರ್ಷದಲ್ಲಿ ಇಡ್ಲಿಗಾಗಿ ಸುಮಾರು 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇವರು ತಾವು ಇಡ್ಲಿ ತಿನ್ನಲು, ತಮ್ಮ ಪ್ರಿಯರಿಗೆ ಇಡ್ಲಿ ತಿನ್ನಿಸಲು ಒಂದು ವರ್ಷದಲ್ಲಿ ಇಷ್ಟೊಂದು ಹಣ ಖರ್ಚು ಮಾಡಿದ್ದಾರೆ. ದೇಶದ ಪ್ರಮುಖ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ಗುರುವಾರ ಈ ವಿಶೇಷ ಗ್ರಾಹಕರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಇಡ್ಲಿ ಪ್ರಿಯರು ಬೆಂಗಳೂರು ಮತ್ತು ಚೆನ್ನೈ ಮುಂತಾದ ನಗರಗಳಿಗೆ ಪ್ರಯಾಣಿಸಿದ್ದು, ಅಲ್ಲಿಂದಲೇ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಮಾಡಿದ ಆರ್ಡರ್‌ಗಳು ಸೇರಿದಂತೆ 8,428 ಪ್ಲೇಟ್ ಇಡ್ಲಿಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ.
ವಿಶ್ವ ಇಡ್ಲಿ ದಿನದ ಸಂದರ್ಭದಲ್ಲಿ (ಮಾರ್ಚ್ 30), ಸ್ವಿಗ್ಗಿ ತನ್ನ ಮಾರ್ಚ್ 30, 2022 ರಿಂದ ಮಾರ್ಚ್ 25, 2023 ರವರೆಗಿನ ಅವಧಿಯ ಇಡ್ಲಿ ಮಾರಾಟದ ವಿಶೇಷತೆಗಳನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾದ ಇಡ್ಲಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಒದಗಿಸುತ್ತದೆ. ಸ್ವಿಗ್ಗಿ ಕಳೆದ 12 ತಿಂಗಳುಗಳಲ್ಲಿ 33 ಮಿಲಿಯನ್ ಪ್ಲೇಟ್ ಇಡ್ಲಿಗಳನ್ನು ಡೆಲಿವರಿ ಮಾಡಿದೆ. ಇದು ಗ್ರಾಹಕರಲ್ಲಿ ಈ ಖಾದ್ಯದ ಅಪಾರ ಜನಪ್ರಿಯತೆಯನ್ನು ಸೂಚಿಸುತ್ತದೆ.
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಇಡ್ಲಿಗಳನ್ನು ಅತಿ ಹೆಚ್ಚು ಆರ್ಡರ್ ಮಾಡಿದ ಮೊದಲ ಮೂರು ನಗರಗಳಾಗಿವೆ. ಮುಂಬೈ, ಕೊಯಮತ್ತೂರು, ಪುಣೆ, ವೈಜಾಗ್, ದೆಹಲಿ, ಕೋಲ್ಕತ್ತಾ ಮತ್ತು ಕೊಚ್ಚಿ ಇತರ ನಗರಗಳು ಸಹ ಇಡ್ಲಿಗಳ ಮಾರಾಟ ಜೋರಾಗಿದೆ. ಇಡ್ಲಿಗಳನ್ನು ಆರ್ಡರ್ ಮಾಡುವ ಅತ್ಯಂತ ಜನಪ್ರಿಯ ಸಮಯವೆಂದರೆ ಬೆಳಿಗ್ಗೆ 8 ರಿಂದ 10 ರವರೆಗೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು ಮತ್ತು ಮುಂಬೈನ ಗ್ರಾಹಕರು ಊಟದ ಸಮಯದಲ್ಲಿ ಇಡ್ಲಿಗಳನ್ನು ಆರ್ಡರ್ ಮಾಡುತ್ತಾರೆ ಎಂದು ವಿಶ್ಲೇಷಣೆಯು ಬಹಿರಂಗಪಡಿಸಿದೆ.