ಕರ್ನಾಟಕ

karnataka

25 ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ.. ವಿಧವೆಯಂತೆ ಜೀವನ ಸಾಗಿಸುತ್ತಿದ್ದ ಮಹಿಳೆ ಬಾಳಲ್ಲಿ ಹೊಸ ಬೆಳಕು

By

Published : Jul 10, 2022, 5:32 PM IST

ಸುಮಾರು 25 ವರ್ಷಗಳ ಹಿಂದೆ ತನ್ನ ತಂದೆ ಮಾನಸಿಕ ಸ್ಥಿತಿಯಿಂದ ಕಟಕ್‌ನಲ್ಲಿರುವ ಮನೆಯನ್ನು ತೊರೆದಿದ್ದರು. ಹಲವು ವರ್ಷಗಳಿಂದ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಪರಿಣಾಮ ಮೃತಪಟ್ಟನೆಂದು ಪರಿಗಣಿಸಿ ಧಾರ್ಮಿಕ ವಿಧಿವಿಧಾನ ಸಹ ನಡೆಸಲಾಗಿತ್ತು ಎಂದಿದ್ದಾರೆ ಇವರ ಮಗ.

ವಿಧವೆಯಂತೆ ಜೀವನ ಮಾಡುತ್ತಿದ್ದವಳ ಬಾಳಲ್ಲಿ ಮತ್ತೇ ಬೆಳಕು
ವಿಧವೆಯಂತೆ ಜೀವನ ಮಾಡುತ್ತಿದ್ದವಳ ಬಾಳಲ್ಲಿ ಮತ್ತೇ ಬೆಳಕು

ಭರತಪುರ(ರಾಜಸ್ಥಾನ) : ಸೋಮೇಶ್ವರ ದಾಸ್ ಎಂಬುವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಕಳೆದ 25 ವರ್ಷಗಳ ಹಿಂದೆ ಒಡಿಶಾದ ಕಟಕ್‌ನ ಹಳ್ಳಿಯೊಂದರಿಂದ ಮನೆ ತೊರೆದಿದ್ದರು. ನಂತರ ಹಲವು ವರ್ಷಗಳಿಂದ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಸೋಮೇಶ್ವರ ದಾಸ್ ಅವರನ್ನು ಮತ್ತೇ ನೋಡುವ ಭರವಸೆಯನ್ನು ಸಂಬಂಧಿಕರು ಕೈಬಿಟ್ಟಿದ್ದರು. ಆದರೆ, ಈಗ ಅವರು ದಿಢೀರ್​ ಪ್ರತ್ಯಕ್ಷ ಆಗಿದ್ದಾರೆ.

ಸಾವಿಗೀಡಾಗಿದ್ದಾರೆ ಎಂದು ಪರಿಗಣಿಸಿ ಧಾರ್ಮಿಕ ವಿಧಿವಿದಾನಗಳನ್ನೂ ಸಹ ಪೂರೈಸಲಾಗಿತ್ತು. ಗಂಡ ಮೃತಪಟ್ಟನೆಂದು ಭಾವಿಸಿ ಇವರ ಹೆಂಡತಿ ವಿಧವೆಯಂತೆ ಜೀವನ ನಡೆಸುತ್ತಿದ್ದರು. ಆದರೆ, ಒಂದು ತಿಂಗಳ ಹಿಂದೆ ಅಪ್ನಾ ಘರ್ ಆಶ್ರಮದಿಂದ ಬಂದ ದೂರವಾಣಿ ಕರೆ ಮತ್ತೆ ಅವರ ಜೀವನದಲ್ಲಿ ಸಂತಸವನ್ನು ಹೆಚ್ಚಿಸಿದೆ. ಮಾಹಿತಿ ಪಡೆದ ನಂತರ ಕಟಕ್‌ನಿಂದ ಸೋಮೇಶ್ವರ್ ದಾಸ್ ಅವರ ಮಗ ಕರೆದುಕೊಂಡು ಬಂದಿದ್ದಾರೆ.

ಸುಮಾರು 25 ವರ್ಷಗಳ ಹಿಂದೆ ತನ್ನ ತಂದೆ ಮಾನಸಿಕ ಸ್ಥಿತಿಯಿಂದ ಕಟಕ್‌ನಲ್ಲಿರುವ ಮನೆಯನ್ನು ತೊರೆದಿದ್ದರು. ಹಲವು ವರ್ಷಗಳಿಂದ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಪರಿಣಾಮ ಆತ ಮೃತಪಟ್ಟನೆಂದು ಪರಿಗಣಿಸಿ ಧಾರ್ಮಿಕ ವಿಧಿವಿಧಾನ ಸಹ ನಡೆಸಲಾಗಿತ್ತು ಎಂದು ಮಗ ಸಂತೋಷ್ ದಾಸ್ ಹೇಳಿದ್ದಾರೆ.

ಕಾಣೆಯಾಗಿದ್ದ ವ್ಯಕ್ತಿ

ತಂದೆಯನ್ನು ಕಂಡು ಗಳಗಳನೆ ಅತ್ತ ಮಗ: ಶನಿವಾರ ಸಂಜೆ ಸೋಮೇಶ್ವರ ದಾಸ್ ಅವರ ಮಗ ಸಂತೋಷ್ ದಾಸ್ ತನ್ನ ಇತರ ಸಂಬಂಧಿಕರೊಂದಿಗೆ ತಂದೆಯನ್ನು ಕರೆದುಕೊಂಡು ಹೋಗಲು ಆಶ್ರಮಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಸೋಮೇಶ್ವರ್ ದಾಸ್ ಅವರನ್ನು ಮಗ ಸಂತೋಷ್ ದಾಸ್ ಗೆ ಪರಿಚಯಿಸಿದಾಗ ಆತನಿಗೆ ಮಗನ ಗುರುತು ಸಿಗಲಿಲ್ಲ. ವಾಸ್ತವವಾಗಿ, ಸೋಮೇಶ್ವರ್ ದಾಸ್ ಅವರ ಮನೆಯನ್ನು ತೊರೆದಾಗ, ಅವರ ಮಗನಿಗೆ ಕೇವಲ 14 ವರ್ಷ ಮತ್ತು ಈಗ ಅವರಿಗೆ 39 ವರ್ಷ. ತಂದೆಯನ್ನು ನೋಡಿದ ಮಗ ಸಂತೋಷ್ ದಾಸ್ ಕಣ್ಣೀರು ಹಾಕಿದ್ದಾರೆ.

ಆಶ್ರಮದ ಎಲ್ಲಾ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಸಂಸ್ಥಾಪಕ ಡಾ ಬಿ ಎಂ ಭಾರದ್ವಾಜ್ ಸೋಮೇಶ್ವರ ದಾಸ್ ಅವರನ್ನು ಅವರ ಮಗನೊಂದಿಗೆ ಒಡಿಶಾದ ಕಟಕ್‌ನಲ್ಲಿರುವ ಅವರ ಮನೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಬೆಳೆದು ನಿಂತ ಭತ್ತದಲ್ಲಿ ಅರಳಿದ ತಿರುವಳ್ಳುವರ್ ಆಕೃತಿ: ರೈತನ ಅದ್ಭುತ ಪ್ರಯತ್ನ

ABOUT THE AUTHOR

...view details