ತೂತುಕುಡಿ( ತಮಿಳುನಾಡು):ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲಸಿದ್ದ ವ್ಯಾಪಾರಿ ಕುಟುಂಬಕ್ಕೆ ಹೆಲಿಕಾಪ್ಟರ್‌ನಲ್ಲಿ ಓಡಾಡುವ ಆಸೆಯಿತ್ತು. ಹೀಗಾಗಿ ಅವರು ತಮ್ಮ ಊರಿನ ದೇವಸ್ಥಾನದ ಕುಂಬಾಭಿಷೇಕದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕೋವಿಲ್‌ಪಟ್ಟಿ ಸಮೀಪದ ದಕ್ಷಿಣ ತೀಡಂಪಟ್ಟಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.
ಇಲ್ಲಿನ ನಿವಾಸಿ ಬಾಲಸುಬ್ರಮಣ್ಯಂ ಜೀವನೋಪಾಯಕ್ಕಾಗಿ ಹಲವು ವರ್ಷಗಳ ಹಿಂದೆ ಚೆನ್ನೈಗೆ ತೆರಳಿದ್ದರು. ಇವರ ಹಿರಿಯ ಮಗ ನಟರಾಜನ್ ಪ್ರಸ್ತುತ ಕಬ್ಬಿಣದ ವ್ಯಾಪಾರಿ ಮತ್ತು ಇನ್ನೊಬ್ಬ ಮಗ ರಾಜತುರೈ ಬೆಂಗಳೂರಿನಲ್ಲಿ ಜವಳಿ ಅಂಗಡಿಯನ್ನು ನಡೆಸುತ್ತಿದ್ದಾರೆ. ನಟರಾಜನ್ ಮತ್ತು ರಾಜತುರೈ ಇಬ್ಬರೂ ಯಾವಾಗಲೂ ಹೆಲಿಕಾಪ್ಟರ್‌ನಲ್ಲಿ ಹಾರುವ ಕನಸು ಕಂಡಿದ್ದರು. ಅಷ್ಟರಲ್ಲಿ ಭದ್ರಕಾಳಿಯಮ್ಮನ ದೇವಸ್ಥಾನದ ಕುಂಬಾಭಿಷೇಕದ ವಿಚಾರ ತಿಳಿದ ಸಹೋದರರು ಹೆಲಿಕಾಪ್ಟರ್ ಮೂಲಕ ಅಲ್ಲಿಗೆ ತೆರಳಲು ನಿರ್ಧರಿಸಿದರು.