ಕೊಲ್ಲಂ, ಕೇರಳ:ಬಾವಿಗೆ ರಿಂಗ್ ಜೋಡಿಸಲು ಹೋಗಿ ವ್ಯಕ್ತಿಯೊಬ್ಬ ಅದೇ ಬಾವಿಯೊಳಗೆ ಬಿದ್ದ ಘಟನೆ ಕೇರಳದ ಕೊಲ್ಲಂನಲ್ಲಿ ಬುಧವಾರ ನಡೆದಿದೆ. ವ್ಯಕ್ತಿ ಬಿದ್ದ ರಭಸಕ್ಕೆ 65 ಅಡಿ ಆಳದಲ್ಲಿ ಸಿಲುಕಿದ್ದಾನೆ. ಕನ್ನನಲ್ಲೂರಿನ ಸುಧೀರ್ ಬಾವಿಯಲ್ಲಿ ಸಿಲುಕಿದ ವ್ಯಕ್ತಿ.
ಸುಧೀರ್ ತನ್ನ ಜಮೀನಿನಲ್ಲಿ ಆಳವಾಗಿ ಕೊರೆಸಲಾದ ಬಾವಿಗೆ ರಿಂಗ್ಗಳನ್ನು ಜೋಡಿಸಲು ಮುಂದಾದಾಗ ಕಾಲು ಜಾರಿ ಅದೇ ಬಾವಿಯೊಳಗೆ ಬಿದ್ದಿದ್ದಾರೆ. ಈ ವೇಳೆ ಇದನ್ನು ಕಂಡ ಜನರು ಬಾವಿಗೆ ಹಗ್ಗ ಬಿಟ್ಟು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಮಣ್ಣು ಬಿದ್ದ ಕಾರಣ ಸುಧೀರ್ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ.
ವಿಷಯ ತಿಳಿದ ಅಗ್ನಿಶಾಮಕ ಮತ್ತು ರಕ್ಷಣಾ ತಂಡ ರಕ್ಷಣೆಗೆ ಬುಧವಾರದಿಂದ ಸತತವಾಗಿ 24 ಗಂಟೆ ಕಾರ್ಯಾಚರಣೆ ನಡೆಸಿದರೂ ಸುಧೀರ್ ಪತ್ತೆಯಾಗಿಲ್ಲ. ಬಾವಿಯ ಒಂದು ಭಾಗ ಕಲ್ಲು ಮತ್ತು ಮಣ್ಣಿನಿಂದ ಮುಚ್ಚಲ್ಪಟ್ಟಿದೆ. ಇದರಿಂದ ಅದನ್ನು ತೆಗೆಯಲು ಮೂರು ಹಿಟಾಚಿಗಳನ್ನು ಬಳಸಲಾಗುತ್ತಿದೆ. ಬಾವಿಯಲ್ಲಿ ಸಿಲುಕಿರುವ ಸುಧೀರ್ನನ್ನು ತಲುಪಲು ಇನ್ನೂ ಕನಿಷ್ಠ 15 ಅಡಿ ಅಗೆಯಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರಕ್ಷಣಾ ಕಾರ್ಯಾಚರಣೆಗೆ ಮಳೆ ಕೂಡ ಅಡ್ಡಿಯಾಗುತ್ತಿದೆ.
ಓದಿ:ಮದುವೆ ಮಂಟಪದಲ್ಲೇ ಕುಸಿದುಬಿದ್ದ ವಧು.. ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ ಯುವತಿ