ಕರ್ನಾಟಕ

karnataka

ETV Bharat / bharat

ಒಂದೇ ಮುಹೂರ್ತದಲ್ಲಿ ತನ್ನಿಬ್ಬರು ಪ್ರೇಯಸಿಯರನ್ನೂ ವರಿಸಿದ ಯುವಕ! - Telangana marriage story

ಇಬ್ಬರು ಅಕ್ಕಂದಿರ ಇಬ್ಬರು ಹೆಣ್ಣುಮಕ್ಕಳನ್ನ ಪ್ರೀತಿಸುತ್ತಿದ್ದ ಯುವಕ ಯಾರಿಗೂ ಮೋಸ ಮಾಡದೆ ಇಬ್ಬರೊಂದಿಗೂ ಏಕಕಾಲದಲ್ಲಿ ಸಪ್ತಪದಿ ತುಳಿದಿದ್ದಾನೆ.

Man Fell in love with two women at a time and married to them on the same day
ಒಂದೇ ಮುಹೂರ್ತದಲ್ಲಿ ತನ್ನಿಬ್ಬರು ಪ್ರೇಯಸಿಯರನ್ನೂ ವರಿಸಿದ ಯುವಕ

By

Published : Jun 18, 2021, 1:39 PM IST

ಆದಿಲಾಬಾದ್​ (ತೆಲಂಗಾಣ): ಒಬ್ಬರಲ್ಲ ಇಬ್ಬರು ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ಮದುವೆಯಾದ ವಿಚಿತ್ರ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕುಟುಂಬಸ್ಥರು, ಗ್ರಾಮಸ್ಥರು, ಬಂಧು-ಬಳಗ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಒಂದೇ ಮುಹೂರ್ತದಲ್ಲಿ ತನ್ನಿಬ್ಬರು ಪ್ರೇಯಸಿಯರನ್ನೂ ವರಿಸಿದ ಯುವಕ

ಆದಿಲಾಬಾದ್ ಜಿಲ್ಲೆಯ ಘಾನಪುರ ಎಂಬ ಗ್ರಾಮದ ಅರ್ಜುನ್ ಎಂಬಾತ ಶಿಕ್ಷಕ ತರಬೇತಿಯನ್ನು ಪೂರ್ಣಗೊಳಿಸಿ, ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಇದ್ದ. ಈತನಿಗೆ ಇಬ್ಬರು ಅಕ್ಕಂದಿರಿದ್ದು, ಬೇರೆ ಬೇರೆ ಗ್ರಾಮಗಳಲ್ಲಿ ವಾಸವಿದ್ದಾರೆ. ಇಬ್ಬರೂ ಅಕ್ಕಂದಿರಿಗೂ ಉಷಾರಾಣಿ ಹಾಗೂ ಸೂರ್ಯಕಲಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಕಳೆದ ಮೂರು ವರ್ಷದಿಂದ ಒಬ್ಬರಿಗೊಬ್ಬರಿಗೆ ತಿಳಿಯದಂತೆ ಇಬ್ಬರೂ ಯುವತಿಯರನ್ನು ಈತ ಪ್ರೀತಿಸುತ್ತಿದ್ದ.

ಇಬ್ಬರು ಯುವತಿಯರ ಕೈ ಹಿಡಿದ ವರ

ಇದನ್ನೂ ಓದಿ: ಟಿ.ನರಸೀಪುರ: 35ರ ಹರೆಯದಲ್ಲೇ ಮೂವರನ್ನು ಮದುವೆಯಾದ ಭೂಪ

ಒಂದು ತಿಂಗಳ ಹಿಂದೆ ಅರ್ಜುನ್ ಈ ವಿಚಾರವನ್ನು ಮೂರೂ ಕುಟುಂಬಗಳಿಗೆ ತಿಳಿಸಿದ್ದಾನೆ. ಕುಟುಂಸ್ಥರು ಆಯಾ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ಮದುವೆಗೆ ಸಮ್ಮತಿ ನೀಡಿದ್ದಾರೆ. ಬುಡಕಟ್ಟು ಸಂಪ್ರದಾಯದ ಪ್ರಕಾರ ಜೂನ್ 14ರಂದು ಉಷಾರಾಣಿ ಹಾಗೂ ಸೂರ್ಯಕಲಾರನ್ನು ಅರ್ಜುನ್​ ವರಿಸಿದ್ದಾನೆ.

ABOUT THE AUTHOR

...view details