ವಯನಾಡ್: ಕೇರಳದಲ್ಲಿ ಲಾಕ್ಡೌನ್ ಕಾರಣ ಅಂಗಡಿ, ಬೀದಿಬದಿಯ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ನಾಯಿಗಳು ಹಾಗೂ ಬೆಕ್ಕುಗಳು ಆಹಾರ ಇಲ್ಲದೇ ಪರಿತಪಿಸುತ್ತಿದ್ದು, ಈ ಪ್ರಾಣಿಗಳಿಗೆ ವ್ಯಕ್ತಿಯೊಬ್ಬರು ಆಹಾರ ನೀಡುತ್ತಿದ್ದಾರೆ.
ಲಾಕ್ಡೌನ್ ಎಫೆಕ್ಟ್: ಬೀದಿಬದಿಯ ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ವಯನಾಡಿನ ಅಬ್ದು - ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ವಯನಾಡಿನ ಅಬ್ದು
ವಯನಾಡಿನ ಪುಲ್ಪಲ್ಲಿ ನಿವಾಸಿ ಅಬ್ದು ಲಾಕ್ಡೌನ್ ಹಿನ್ನೆಲೆ ಆಹಾರ, ಹಾಲು ಸಿಗದೇ ಸಂಕಷ್ಟಕ್ಕೀಡಾಗಿರುವ ನಾಯಿಗಳು ಮತ್ತು ಬೆಕ್ಕುಗಳಿಗೆ ಆಹಾರ, ಹಾಲು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
kerala
ವಯನಾಡ್‌ನ ಪುಲ್ಪಲ್ಲಿ ನಿವಾಸಿ ಅಬ್ದು ಹಸಿದಿರುವ ನಾಯಿಗಳು ಹಾಗೂ ಹಾಲಿಲ್ಲದೇ ಕಂಗಾಲಾಗಿರುವ ಬೆಕ್ಕುಗಳಿಗೆ ಹಾಲು- ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಕೊರೊನಾ ಕೇಸ್ಗಳು ಹೆಚ್ಚಾದ ಕಾರಣ ಪುಲ್ಪಲ್ಲಿ ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಈ ಹಿನ್ನೆಲೆ ಅಬ್ದು ತಮ್ಮ ಮನೆಯಿಂದಲೇ ಪ್ರಾಣಿಗಳಿಗೆ ಆಹಾರ ತಂದು ಅವುಗಳ ಹಸಿವು ನೀಗಿಸುತ್ತಿದ್ದಾರೆ.