ಕರ್ನಾಟಕ

karnataka

ETV Bharat / bharat

ಜಾರ್ಖಂಡ್​ ರೋಪ್​ವೇ ದುರಂತ: ರಕ್ಷಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು - ರೋಪ್ ​ವೇ ದುರಂತ

ರೋಪ್​ವೇಯಲ್ಲಿ ಪರಸ್ಪರ ಕೇಬಲ್​ ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಸುಮಾರು 48 ಜನರು ತೊಂದರೆಗೊಳಗಾಗಿದ್ದು, ಅವರಲ್ಲಿ ಕೆಲವರ ರಕ್ಷಣೆ ಮಾಡಲಾಗಿದೆ.

Man falls to death while being rescued by IAF chopper
Man falls to death while being rescued by IAF chopper

By

Published : Apr 11, 2022, 8:37 PM IST

ದಿಯೋಘರ್​(ಜಾರ್ಖಂಡ್):ಜಿಲ್ಲೆಯ ತ್ರಿಕೂಟ್​ ಬೆಟ್ಟದಲ್ಲಿ ಕೇಬಲ್ ಕಾರ್​ ಡಿಕ್ಕಿಯಾಗಿರುವ ದುರಂತ ನಡೆದಿದ್ದು, ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಭಾರತೀಯ ವಾಯುಪಡೆ ಹೆಲಿಕಾಪ್ಟರ್​ಗಳ ಸಹಾಯದಿಂದ ಕೆಲವರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದಿರುವ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.

ರಕ್ಷಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು

ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ರೋಪ್​ವೇ ಕೇಬಲ್ ಕಾರು ಪರಸ್ಪರ ಡಿಕ್ಕಿ ಹೊಡೆದಿರುವ ಪರಿಣಾಮ 48 ಮಂದಿ ಟ್ರಾಲಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಸುಮಾರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಣೆ ಮಾಲಾಗಿದೆ. ಕಾರ್ಯಾಚರಣೆ ವೇಳೆ ಐಎಎಫ್ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲ್ಪಟ್ಟಿದ್ದ ವ್ಯಕ್ತಿಯೋರ್ವ ಆಯತಪ್ಪಿ ಅಲ್ಲಿಂದ ಕೆಳಗೆ ಬಿದ್ದಿದ್ದಾನೆ. ಇತ್ತೀಚಿನ ವರದಿಗಳ ಪ್ರಕಾರ 30 ಜನರ ರಕ್ಷಣೆ ಮಾಡಲಾಗಿದ್ದು, ಕೆಲವರು ಅಲ್ಲೇ ಸಿಲುಕಿಕೊಂಡಿದ್ದಾರೆ. ಕತ್ತಲು ಆವರಿಸಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:'ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕಾಶ್ಮೀರ ವಿವಾದ ಇತ್ಯರ್ಥವಾಗ್ಬೇಕು': ಪಾಕ್​ ನಿಯೋಜಿತ ಪ್ರಧಾನಿ

ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ, ತ್ರಿಕೂಟ ರೋಪ್‌ವೇ ಬಾಬಾ ವೈದ್ಯನಾಥ ದೇಗುಲದಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು, 766 ಮೀಟರ್ ಉದ್ದವಿದೆ. ಪರ್ವತವು 392 ಮೀಟರ್ ಎತ್ತರವಿದೆ ಎಂದು ಮಾಹಿತಿ ನೀಡಿದೆ.

ABOUT THE AUTHOR

...view details