ಕರ್ನಾಟಕ

karnataka

ETV Bharat / bharat

ಪತ್ನಿ ಕೊಂದು ಶವ ಸಾಗಿಸುತ್ತಿದ್ದಾಗ ಬೆನ್ನಟ್ಟಿದ ಜನರು; ಶವದ ಸಮೇತ ಪೊಲೀಸ್ ಠಾಣೆಗೆ ಬಂದ ಆರೋಪಿ - man enters police station with wifes corpse

ಪತ್ನಿಯನ್ನು ಕೊಲೆಗೈದು ಪತಿ ಆಕೆಯ ಶವದೊಂದಿಗೆ ಪೊಲೀಸ್ ಠಾಣೆ ಬಂದ ಘಟನೆ ಬಿಹಾರದಲ್ಲಿ ನಡೆದಿದೆ.

murder
ಕೊಲೆ

By

Published : Mar 6, 2023, 12:26 PM IST

ಬಿಹಾರ: ಪತ್ನಿಯನ್ನು ಹತ್ಯೆಗೈದು ಆಕೆಯ ಶವವನ್ನು ಬೇರೆಡೆ ಸಾಗಿಸಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ಅನುಮಾನದಿಂದ ಗ್ರಾಮಸ್ಥರು ಹಿಂಬಾಲಿಸಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿ, ಮೃತದೇಹದ ಸಮೇತ ನೇರವಾಗಿ ಪೊಲೀಸ್​ ಠಾಣೆಗೆ ಹೋದ ವಿಚಿತ್ರ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ.

ಸಂಜಯ್ ದಾಸ್ ಎಂಬಾತ ತನ್ನ ಹೆಂಡತಿಯನ್ನೇ ಕೊಂದಿದ್ದಾನ. ಅಧಿಕೃತ ಮೂಲಗಳ ಮಾಹಿತಿ ಪ್ರಕಾರ, ಈತ ಹೆಂಡತಿಯ ಶವವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ. ಗ್ರಾಮಸ್ಥರು ಗಮನಿಸಿ, ಬೆನ್ನಟ್ಟಲು ಪ್ರಾರಂಭಿಸಿದ್ದಾರೆ. ಇದರಿಂದ ಭಯಗೊಂಡ ಸಂಜಯ್, ಶವದೊಂದಿಗೆ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಂಜಯ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಪ್ರತ್ಯೇಕ ಪ್ರಕರಣ: ಹಣಕ್ಕಾಗಿ ತಂದೆ ಕೊಲೆ ಮಾಡಿದ ಮಗ.. ಹೊಲಕ್ಕೆ ತಂದೆ ಭೇಟಿಗೆ ಹೋದ ಪುತ್ರ ಕಾಲುವೆಯಲ್ಲಿ ಬಿದ್ದು ಸಾವು

ವಿಚಾರಣೆಯ ಬಳಿಕ, ಸಂಜಯ್ ಮತ್ತು ಅವರ ಸೋದರಳಿಯ ಸುಜಲ್ ದಾಸ್ ಎಂಬಾತನನ್ನು ಬಂಧಿಸಲಾಗಿದೆ. ಮೃತ ಮಹಿಳೆಯನ್ನು ಶಿಲ್ಪಿ ಕುಮಾರಿ ಎಂದು ಗುರುತಿಸಲಾಗಿದೆ. ಸಂಜಯ್ ತನ್ನ ಸಂಬಂಧಿಕರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ಬಗ್ಗೆ ಶಿಲ್ಪಿಗೆ ತಿಳಿದು ಬಂದಿದೆ. ಶನಿವಾರ ರಾತ್ರಿ ಇದೇ ವಿಚಾರವಾಗಿ ಗಂಡ, ಹೆಂಡತಿ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ಸಂಜಯ್ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ, ಕೊಲೆಯನ್ನು 'ಆತ್ಮಹತ್ಯೆ' ಎಂದು ಬಿಂಬಿಸಲು ನೇಣು ಹಾಕುವ ಮೂಲಕ ವಿಫಲ ಪ್ರಯತ್ನ ಮಾಡಿದ್ದಾನೆ. ಶವವನ್ನು ಮರೆಮಾಚಲು ಯತ್ನಿಸಿದ ಆರೋಪಿ, ಮೃತದೇಹವನ್ನು ಸ್ಕೂಟರ್‌ನಲ್ಲಿ ಸಾಗಿಸುತ್ತಿರುವುದು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಕೂಡಲೇ ಆತನನ್ನು ಹಿಡಿಯಲು ಗ್ರಾಮಸ್ಥರು ಹಿಂದೆ ಓಡುತ್ತಿದ್ದಂತೆ ಗಾಬರಿಗೊಂಡ ಆತ, ನೇರವಾಗಿ ಪೊಲೀಸ್​ ಠಾಣೆಗೆ ಬಂದಿದ್ದಾನೆ.

ಇದನ್ನೂ ಓದಿ:ಮದ್ಯ ಸೇವೆನೆಗೆ ಹಣ ನೀಡುವಂತೆ ಪೀಡಿಸಿದ್ದಕ್ಕೆ ಕೊಲೆ - ಆರೋಪಿ ಬಂಧನ

ಇನ್ನು ಪತ್ನಿಯನ್ನು ಹತ್ಯೆಗೈದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಸಂಜಯ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಸುಜಲ್‌ ವಿರುದ್ಧ ಸಹ ಕೆಸ್​ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಲಿವ್​ ಇನ್​​​​​​​ ರಿಲೇಷನ್​​ಶಿಪ್​​ನಲ್ಲಿದ್ದ​ ಗೆಳತಿ ಹತ್ಯೆ ಮಾಡಿದ್ದ ಆರೋಪಿ ಬಂಧನ..

"ಸಂಜಯ್ ತನ್ನ ಸಂಬಂಧಿಕರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ನನ್ನ ಮಗಳಿಗೆ ತಿಳಿದಾಗ ಆಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಬಳಿಕ ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಂಜಯನೇ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ" ಎಂದು ಮೃತಳ ತಂದೆ ಬಾಲೇಶ್ವರ್ ದಾಸ್ ತಿಳಿಸಿದ್ದಾರೆ.

ABOUT THE AUTHOR

...view details