ಕರ್ನಾಟಕ

karnataka

ETV Bharat / bharat

ಉತ್ತರಾಖಂಡ: ನರಭಕ್ಷಕ ಚಿರತೆ ಗುಂಡೇಟಿಗೆ ಬಲಿ - ETv Bharat kannada news

ತೆಹ್ರಿ ಜಿಲ್ಲೆಯಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳು ಚಿರತೆಯನ್ನು ಹೊಡೆದುರುಳಿಸಿದರು.

Man-eating leopard killed by gunshot
ನರಭಕ್ಷಕ ಚಿರತೆ ಗುಂಡೇಟಿಗೆ ಬಲಿ

By

Published : Dec 8, 2022, 5:56 PM IST

ಉತ್ತರಾಖಂಡ:ಇಲ್ಲಿನತೆಹ್ರಿ ಜಿಲ್ಲೆಯ ಭಿಲಂಗಾನ ಬ್ಲಾಕ್‌ನ ಅಖೋಡಿ ಗ್ರಾಮದ ಎಂಟು ವರ್ಷದ ಬಾಲಕನನ್ನು ಶನಿವಾರ ಕೊಂದು ಹಾಕಿದ್ದ ಚಿರತೆಯನ್ನು ಮೈಕೋಟ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ. ಅರಣ್ಯ ಇಲಾಖೆ ನಿಯೋಜಿಸಿದ ಶಾರ್ಪ್‌ಶೂಟರ್‌ಗಳು ಗುಂಡಿಕ್ಕಿ ಕೊಂದಿದ್ದಾರೆ. ಮೊದಲು ಗುಂಡು ತಗುಲಿ ಗಾಯಗೊಂಡ ಚಿರತೆ ಕಾಡಿನೊಳಗೆ ಓಡಿ ರಾತ್ರಿಯಿಡೀ ಪೊದೆಯಲ್ಲಿ ಅಡಗಿಕೊಂಡಿದ್ದು, ಬೆಳಿಗ್ಗೆ ಹುಡುಕಾಟ ನಡೆಸಿ ಹತ್ಯೆ ಮಾಡಲಾಗಿದೆ. ನೈಸರ್ಗಿಕ ಬೇಟೆ ಸಾಧ್ಯವಾಗದೆ ಹಸಿವಿನಿಂದ ಮನುಷ್ಯರ ಮೇಲೆ ದಾಳಿ ಮಾಡಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details