ತಮಿಳುನಾಡು:ತಿರುವಣ್ಣಾಮಲೈ ಜಿಲ್ಲೆಯ ವನ್ನಂಕುಳಂ ಗ್ರಾಮದಲ್ಲಿ ಮಾಜಿ ಸೈನಿಕ ಕುಪ್ಪನ್ ಎಂಬುವವರನ್ನು ಅವರ ಆಸೆಯಂತೆ ಪತ್ನಿ ಸಮಾಧಿ ಪಕ್ಕದಲ್ಲಿ ಅವರೇ ತೋಡಿಟ್ಟಿದ್ದ ಸಮಾಧಿಯಲ್ಲಿ ಹೂಳಲಾಗಿದೆ. ಎಂ.ಸಿ.ಕುಪ್ಪನ್ (98) ಅವರು 1942ರಲ್ಲಿ ಎರಡನೇ ಮಹಾಯುದ್ಧದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಅವರು ಮಗ ಪ್ರಭಾಕರನ್, ಇಬ್ಬರು ಪುತ್ರಿಯರಾದ ನಿರ್ಮಲಾ ಮತ್ತು ಮಾಲಾ ಅವರನ್ನು ಅಗಲಿದ್ದಾರೆ. ಅವರ ಮಗ ಪ್ರಭಾಕರನ್ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ.
1998ರ ಜು.10ರಂದು ಕುಪ್ಪನ್ ಅವರ ಪತ್ನಿ ಶಾರದಮ್ಮ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಇದಾದ ಬಳಿಕ ಮೃತ ಪತ್ನಿಗಾಗಿ ವನ್ನಂಕುಳಂ ಸ್ಮಶಾನ ಪ್ರದೇಶದಲ್ಲಿ 52 ಸೆಂಟ್ಸ್ ಭೂಮಿಯನ್ನು ಖರೀದಿಸಿದ್ದರು. ಅಲ್ಲಿ ಶಾರದಮ್ಮಳ ಸಮಾಧಿ ಮಾಡಿ ಸ್ಮಾರಕ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೇ ಪತ್ನಿ ಸತ್ತ ಮರುದಿನವೇ ತಾನು ಸತ್ತರೆ ಅದೇ ಜಾಗದಲ್ಲಿ ಹೂಳಲು ಪತ್ನಿಯನ್ನು ಹೂತಿಟ್ಟ ಜಾಗದ ಬಳಿಯೇ ಸಮಾಧಿ ತೋಡಿದ್ದರಂತೆ.