ಚಿತ್ತೂರು(ಆಂಧ್ರಪ್ರದೇಶ):ಕೊರೊನಾದಿಂದ ಚೇತರಿಸಿಕೊಂಡು ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವ್ಯಕ್ತಿ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿತ್ತೂರು ಜಿಲ್ಲೆಯ ಗುಡಿಪಲ್ಲೆ ಸಮೀಪದ ಮಿಡ್ಡೂರ್ ಗ್ರಾಮದವರಾದ ಚಂದ್ರಶೇಖರ್ ಮೃತ ವ್ಯಕ್ತಿ. ಇವರು ಹೆಂಡತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಕೊರೊನಾ ಸೋಂಕು ಕಾಣಸಿಕೊಂಡಿದ್ದರಿಂದ ಕುಪ್ಪಂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.