ಕರ್ನಾಟಕ

karnataka

ETV Bharat / bharat

ಪೊಲೀಸರಿಂದ ಕ್ರೂರವಾಗಿ ಥಳಿತಕ್ಕೊಳಗಾಗಿ ಪ್ರಾಣಬಿಟ್ಟ ವ್ಯಕ್ತಿ.. SI ಅರೆಸ್ಟ್​​ - ತಮಿಳುನಾಡಿನ ಸೇಲಂ

ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರಿಂದ ಆತ ಸಾವನ್ನಪ್ಪಿದ್ದು, ಇದೀಗ ಸಬ್​ ಇನ್ಸ್​ಪೆಕ್ಟರ್​ನ ಅರೆಸ್ಟ್​ ಮಾಡಲಾಗಿದೆ.

Man brutally thrashed by police
Man brutally thrashed by police

By

Published : Jun 23, 2021, 7:20 PM IST

ಸೇಲಂ(ತಮಿಳುನಾಡು):ತನ್ನ ಸ್ನೇಹಿತರೊಂದಿಗೆ ತೆರಳಿ ಮದ್ಯಪಾನ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾಗಿದ್ದ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಬ್​ ಇನ್ಸ್​​ಪೆಕ್ಟರ್​​​ನನ್ನ ಬಂಧನ ಮಾಡಲಾಗಿದೆ.

ತಮಿಳುನಾಡಿನ ಸೇಲಂನಲ್ಲಿ ಈ ಘಟನೆ ನಡೆದಿದೆ. ಆರುಮುಗಂನ ಪುತ್ರ ಮುರುಗೇಶನ್​(40) ದಿನಸಿ ಅಂಗಡಿ ವ್ಯಾಪಾರ ನಡೆಸುತ್ತಿದ್ದನು. ನಿನ್ನೆ ಬೆಳಗ್ಗೆ ಮದ್ಯ ಖರೀದಿ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದನು. ಅಲ್ಲಿಂದ ವಾಪಸ್​ ಬರುತ್ತಿದ್ದ ವೇಳೆ, ಪಪ್ಪನಾಯಕ್ಕನಟ್ಟಿ ಅರಣ್ಯ ಇಲಾಖೆ ಚೆಕ್​​ಪೋಸ್ಟ್​ ಬಳಿ ಕರ್ತವ್ಯದಲ್ಲಿದ್ದ ಪೊಲೀಸರು ಮುರುಗೇಶನ್​ನನ್ನು ವಶಕ್ಕೆ ಪಡೆದು ಕೊಂಡಿದ್ದರು.

ಪೊಲೀಸರಿಂದ ಕ್ರೂರವಾಗಿ ಥಳಿತಕ್ಕೊಳಗಾಗಿ ಪ್ರಾಣಬಿಟ್ಟ ವ್ಯಕ್ತಿ

ಈ ವೇಳೆ ಪೊಲೀಸರೊಂದಿಗೆ ಮುರುಗೇಶನ್ ಹಾಗೂ ಆತನ ಸ್ನೇಹಿತರು ವಾಗ್ವಾದ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಪೊಲೀಸರು ಮುರುಗೇಶನ್​ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಹೀಗಾಗಿ ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ಚಿಕಿತ್ಸೆಗೋಸ್ಕರ ಸೇಲಂನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿರಿ: ವಿಶ್ವದ ಅತಿ ದೊಡ್ಡ ದಾನಿಯಾದ Jamsetji Tata... ನೀಡಿದ ಹಣ ಎಷ್ಟು ಗೊತ್ತಾ!?

ಇದರಿಂದ ಆಕ್ರೋಶಗೊಂಡಿದ್ದ ಮುರುಗೇಶನ್​​ ಸಂಬಂಧಿಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಜತೆಗೆ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿದ್ದಾರೆ. ಜತೆಗೆ ತಮಗೆ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ. ಈಗಾಗಲೇ ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್​​ ಅವರೊಂದಿಗೆ ಮಾತುಕತೆ ನಡೆಸಿದ್ದು, ತನಿಖೆಗೆ ಆದೇಶ ನೀಡಿರುವುದಾಗಿ ಹೇಳಿದ್ದಾರೆ. ಜತೆಗೆ ಕರ್ತವ್ಯದಲ್ಲಿದ್ದ ಇನ್ಸ್​ಪೆಕ್ಟರ್​ ಪೆರಿಯಾಸಾಮಿಯನ್ನ ಬಂಧನ ಮಾಡಿದ್ದಾರೆ.

ABOUT THE AUTHOR

...view details