ಕರ್ನಾಟಕ

karnataka

ETV Bharat / bharat

ಇದೆಂಥಾ ಹುಚ್ಚಾಟ? ಕಾಳಿಂಗ ಸರ್ಪದೊಂದಿಗೆ ಆಟವಾಡಲು ಹೋಗಿ ಸಾವನ್ನಪ್ಪಿದ ವ್ಯಕ್ತಿ! - ಕಾಳಿಂಗ ಸರ್ಪದೊಂದಿಗೆ ಆಟ

ಕಾಳಿಂಗ ಸರ್ಪ ಕುತ್ತಿಗೆ ಭಾಗಕ್ಕೆ ಸುತ್ತಿಕೊಂಡು ಗ್ರಾಮದಲ್ಲಿ ಸುತ್ತಾಟ ನಡೆಸಿದ್ದ ವೇಳೆ ಅದರಿಂದ ಕಡಿತಕ್ಕೊಳಗಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

King Cobra
King Cobra

By

Published : Oct 6, 2021, 7:01 PM IST

ಗುವಾಹಟಿ(ಅಸ್ಸೋಂ):ದೈತ್ಯ ಕಾಳಿಂಗ ಸರ್ಪದೊಂದಿಗೆ ಆಟವಾಡುವ ಹುಚ್ಚಾಟಕ್ಕೆ ಮುಂದಾಗಿದ್ದ ವೇಳೆ ಕಡಿತಕ್ಕೊಳಗಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

ಕಾಳಿಂಗ ಸರ್ಪದೊಂದಿಗೆ ಆಟವಾಡಲು ಹೋಗಿ ಸಾವನ್ನಪ್ಪಿದ ವ್ಯಕ್ತಿ!

60 ವರ್ಷದ ವ್ಯಕ್ತಿಯೋರ್ವ ಭತ್ತದ ಗದ್ದೆಯಲ್ಲಿ ಕೆಲಸ ಮಾಡ್ತಿದ್ದ ವೇಳೆ ವಿಷಕಾರಿ ಕಾಳಿಂಗ ಸರ್ಪ ನೋಡಿದ್ದಾನೆ. ತಕ್ಷಣವೇ ವಿಷಪೂರಿತ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿರುವ ಆತ, ಅದನ್ನ ಕುತ್ತಿಗೆ ಭಾಗಕ್ಕೆ ಸುತ್ತಿಕೊಂಡು, ತನ್ನ ಹಳ್ಳಿಯಲ್ಲಿ ತಿರುಗಾಡಿದ್ದಾನೆ. ಈ ವೇಳೆ ಹಾವು ಆತನಿಗೆ ಕಚ್ಚಿದೆ.

ಇದನ್ನೂ ಓದಿರಿ:ಪಾಕ್​ ಮಿಲಿಟರಿಯಲ್ಲಿ ಮಹತ್ವದ ಬದಲಾವಣೆ: ಐಎಸ್​​ಐ ಮುಖ್ಯಸ್ಥ ಸ್ಥಾನಕ್ಕೆ ಹೊಸಬರ ನೇಮಕ

ತಕ್ಷಣವೇ ವ್ಯಕ್ತಿಯನ್ನ ಸಿಲ್ಚಾರ್​​ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನ ರಘುನಂದನ್​ ಎಂದು ಗುರುತಿಸಲಾಗಿದೆ.

ABOUT THE AUTHOR

...view details