ಮುಂಬೈ: ನೈಜೀರಿಯಾ ದೇಶದ ಪ್ರಯಾಣದ ಇತಿಹಾಸ ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಸುದ್ದಿಯಾಗಿತ್ತು. ಈಗ ಮರಣೋತ್ತರ ವರದಿ ಹಾಗೂ ಕೋವಿಡ್ ವರದಿ ಬಂದಿದ್ದು, ಆತನಿಗೆ ಒಮಿಕ್ರಾನ್ ಇತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಮಹಾರಾಷ್ಟ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಡಿ.28ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್ ದೃಢ..
52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸಾವಿನ ನಂತರ ವರದಿ ಬಂದಿದ್ದು. ಆತನಿಗೆ ಒಮಿಕ್ರಾನ್ ದೃಢಪಟ್ಟಿದೆ.
ಹೃದಯಾಘಾತದಿಂದ ಸತ್ತಿದ್ದ ವ್ಯಕ್ತಿಗೆ ಒಮಿಕ್ರಾನ್ ದೃಢ
ಬರೋಬ್ಬರಿ 5,368 ಹೊಸ ಕೋವಿಡ್ ಪ್ರಕರಣಗಳು:
ಮಹಾರಾಷ್ಟ್ರದಲ್ಲಿ 5,368 ಹೊಸ ಕೋವಿಡ್ ಪ್ರಕರಣಗಳು (ನಿನ್ನೆಯ ಸಂಖ್ಯೆಗಿಂತ 1,468 ಜಿಗಿತ) ವರದಿಯಾಗಿವೆ. ಇಂದು 1,193 ಜನರು ಚೇತರಿಸಿಕೊಂಡಿದ್ದಾರೆ. ಹಾಗೆ ಇಂದು ಕೊರೊನಾದಿಂದ 22 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 18,217 ಕ್ಕೆ ತಲುಪಿದ್ದು, ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 450 ಕ್ಕೆ ಏರಿದೆ. ರಾಜ್ಯದಲ್ಲಿಂದು ಕೊರೊನಾದ ಇತರೆ 198 ವಿಭಿನ್ನ ಪ್ರಕರಣಗಳು ದಾಖಲಾಗಿವೆ.
Last Updated : Dec 30, 2021, 11:02 PM IST