ಕರ್ನಾಟಕ

karnataka

ಎದ್ದೇಳಪ್ಪಾ, ಮನೆಗೆ ಹೋಗೊಣಾ... ಹೆಂಡ್ತಿ, ಮಕ್ಕಳು ಕಾಯ್ತಿರ್ತಾರೆ!!

By

Published : Apr 25, 2021, 10:37 PM IST

Updated : Apr 26, 2021, 1:06 PM IST

ನೆಲದಲ್ಲಿ ಕುಳಿತುಕೊಂಡ ಸ್ವಲ್ಪ ಸಮಯದಲ್ಲೇ ಮಗ ಉಸಿರಾಡಲು ಕಷ್ಟಪಡುತ್ತಿರುವುದನ್ನು ತಾಯಿ ಕಾಣುತ್ತಾಳೆ. ಸ್ವಲ್ಪ ಸಮಯಕ್ಕೆ ಮಗ ಉಸಿರಾಟವನ್ನೇ ನಿಲ್ಲಿಸುತ್ತಾನೆ. ತಾಯಿ ಮಗನನ್ನು ಎಷ್ಟೇ ಎಬ್ಬಿಸಿದ್ರೂ ಪ್ರಯೋಜನವಾಗಲಿಲ್ಲ.

corona
corona

ನಿಜಾಮಾಬಾದ್: ಕಣ್ಣು ಮುಂದೆ ಚೆನ್ನಾಗಿದ್ದ ಮಗ ವಿಪರೀತ ಜ್ವರದಿಂದ ನರಳಿ-ನರಳಿ, ನೋಡ ನೋಡುತ್ತಲೇ ಉಸಿರು ಚೆಲ್ಲಿದ ಘಟನೆ ನಿಜಾಮಾಬಾದ್​ ಜಿಲ್ಲೆಯ ರೆಂಜಲ್ ತಾಲೂಕಿನಲ್ಲಿ ನಡೆದಿದೆ.

ಬೋರ್ಲಾಂ ಗ್ರಾಮದ ನಿವಾಸಿ ಅಶೋಕ್​ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಕೋವಿಡ್​ ಬಂದಿರಬಹುದೇ ಎಂಬ ಸಂಶಯದಿಂದ ತಾಯಿ ಮತ್ತು ಆತನ ಸಹೋದರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದರು. ಆಗ ಕೋವಿಡ್​ ವರದಿ ನೆಗೆಟಿವ್​ ಬಂದಿದೆ.

ಆದ್ರೆ ಅಶೋಕ್‌ಗೆ ಉಸಿರಾಟದ ತೊಂದರೆ ಮತ್ತೆ ಹೆಚ್ಚಾಗತೊಡಗಿದ್ದು, ಕುಟುಂಬದ ಮನವಿ ಮೇಲೆ ಸಿಬ್ಬಂದಿ ಮತ್ತೊಮ್ಮೆ ಕೋವಿಡ್​ ವರದಿಗೆ ಒಳಪಡಿಸಿದ್ದಾರೆ. ಕೋವಿಡ್​ ವರದಿ ಬರೋದು ಸ್ವಲ್ಪ ತಡವಾಗುತ್ತೆ ಎಂದು ಸಿಬ್ಬಂದಿ ಅಶೋಕ್​ ಮತ್ತು ಆತನ ಕುಟುಂಬಕ್ಕೆ ತಿಳಿಸಿದ್ದಾರೆ. ಈ ವೇಳೆ ಅಶೋಕ್​ ಕುಟುಂಬ ಅಲ್ಲಿಯೇ ಪಕ್ಕದಲ್ಲಿದ್ದ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು.

ಕುಳಿತುಕೊಂಡ ಸ್ವಲ್ಪ ಸಮಯಕ್ಕೆನೇ ಮಗ ಅಶೋಕ್​ ಉಸಿರಾಡಲು ಕಷ್ಟಪಡುತ್ತಿರುವುದನ್ನು ತಾಯಿ ಗಮನಿಸಿದ್ದಾಳೆ. ಏನೂ ತೋಚದಾದ ಆಕೆ ಸಹಾಯಕ್ಕೆ ಯಾರನ್ನಾದರೂ ಕರೆಯುವ ಇರಾದೆ ತೋರುತ್ತಾಳೆ. ಆದರೆ, ಅಷ್ಟರಲ್ಲೇ ಅಶೋಕ್​ ಪ್ರಾಣಪಕ್ಷಿ ಹಾರಿ ಹೋಗಿದೆ. ತನ್ನ ಕಣ್ಣ ಮುಂದೆಯೇ ಮಗ ಪ್ರಾಣ ಬಿಟ್ಟಿರುವುದು ಆಕೆಗೆ ಜೀರ್ಣಿಸಲಾಗದೆ ಸ್ತಬ್ದಳಾಗುತ್ತಾಳೆ.

ತೀವ್ರ ಜ್ವರ ಅಥವಾ ಹೃದಯಾಘಾತದಿಂದ ಅಶೋಕ್​ ಸಾವನ್ನಪ್ಪಿರಬಹುದೆಂದು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ. ಮಗ ಜೀವನದ ಪ್ರಯಾಣ ನಿಲ್ಲಿಸಿರುವುದನ್ನು ಕಂಡು, 'ಮೇಲೆದ್ದೇಳಪ್ಪಾ... ಎದ್ದೇಳು, ಮನೆಗೆ ಹೋಗೋಣ.. ಹೆಂಡ್ತಿ, ಮಕ್ಕಳು ನಿನಗೋಸ್ಕರ ಕಾಯುತ್ತಿರುತ್ತಾರೆ..' ಎಂದು ರೋಧಿಸುತ್ತಿದ್ದ ಆರ್ತನಾದ ಅಲ್ಲಿದ್ದವರ ಕಣ್ಣಾಲಿಗಳಲ್ಲಿ ನೀರು ತರಿಸುವಂತಿತ್ತು.

Last Updated : Apr 26, 2021, 1:06 PM IST

ABOUT THE AUTHOR

...view details