ಕರ್ನಾಟಕ

karnataka

ETV Bharat / bharat

Shocking : ಮುಖದ ಮೇಲೆ ಹಲಸಿನ ಹಣ್ಣು ಬಿದ್ದು ವ್ಯಕ್ತಿ ಸಾವು! - ಪಶ್ಚಿಮ ಗೋದಾವರಿ ಸುದ್ದಿ,

Shocking ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಹಣ್ಣುಗಳನ್ನು ಕಟ್​ ಮಾಡುವ ವೇಳೆ ಹಲಸಿನ ಹಣ್ನೊಂದು ಮುಖದ ಮೇಲೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ..

man died due to falling jack fruit, man died due to falling jack fruit on him, man died due to falling jack fruit on him at West Godavari, West Godavari news, West Godavari news, ಹಲಸಿನ ಹಣ್ಣು ಬಿದ್ದು ವ್ಯಕ್ತಿ ಸಾವು, ಪಶ್ಚಿಮ ಗೋದಾವರಿಯಲ್ಲಿ ಹಲಸಿನ ಹಣ್ಣು ಬಿದ್ದು ವ್ಯಕ್ತಿ ಸಾವು, ಪಶ್ಚಿಮ ಗೋದಾವರಿ ಸುದ್ದಿ, ಪಶ್ಚಿಮ ಗೋದಾವರಿ ಅಪರಾಧ ಸುದ್ದಿ,
ತಲೆ ಮೇಲೆ ಹಲಸಿನ ಹಣ್ಣು ಬಿದ್ದು ವ್ಯಕ್ತಿ ಸಾವು

By

Published : Jul 9, 2021, 1:22 PM IST

ಪಶ್ಚಿಮ ಗೋದಾವರಿ :ಹಲಸಿನ ಮರದಲ್ಲಿ ಹಣ್ಣುಗಳನ್ನು ಕಟ್​ ಮಾಡುತ್ತಿರುವ ವೇಳೆ ಪ್ರಮಾದವಶಾತ್​ ಹಲಸಿನ ಹಣ್ಣೊಂದು ವ್ಯಕ್ತಿಯ ಮುಖದ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ಪಾಲಕೊಲ್ಲು ಗ್ರಾಮದಲ್ಲಿ ನಡೆದಿದೆ. ನಾಲ್ಕೈದು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವೆಂಕಟೇಶ್ವರ್​ ನಗರದ ಮಾಜಿ ಕೌನ್ಸಿಲರ್​ ಮತ್ತು ವ್ಯಾಪಾರಸ್ಥರಾಗಿದ್ದ ನಾರಾಯಣ ಮೂರ್ತಿ (66) ಎಂಬುವರು ತನ್ನ ಮನೆಯಂಗಳದಲ್ಲಿರುವ ಹಲಸಿನ ಮರದಲ್ಲಿ ಹಣ್ಣುಗಳನ್ನು ಕಟ್​ ಮಾಡುತ್ತಿದ್ದರು. ಈ ವೇಳೆ ಹಲಸಿನ ಹಣ್ಣೊಂದು ಮುಖದ ಮೇಲೆ ಬಿದ್ದಿದೆ. ಮುಖದ ಮೇಲೆ ಹಣ್ಣು ಬಿದ್ದ ಪರಿಣಾಮ ನಾರಾಯಣ ಮೂರ್ತಿ ಕೆಳಗೆ ಕುಸಿದು ಬಿದ್ದಿದ್ದಾರೆ.

ತಲೆ ಮೇಲೆ ಹಲಸಿನ ಹಣ್ಣು ಬಿದ್ದು ವ್ಯಕ್ತಿ ಸಾವು

ಸಿಮೆಂಟ್​ ರಸ್ತೆಯಲ್ಲಿ ಬಿದ್ದ ಪರಿಣಾಮ ನಾರಾಯಣ ಮೂರ್ತಿ ತಲೆಗೆ ಬಲವಾಗಿ ಪೆಟ್ಟಾಗಿ ರಕ್ತಸ್ರಾವ ಆಗಿದೆ. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಭೀಮವರಂನ ಆಸ್ಪತ್ರೆಗೆ ದಾಖಲಿಸಲು ವಾಹನದಲ್ಲಿ ಹತ್ತಿಸುತ್ತಿರುವಾಗ ನಾರಾಯಣ ಮೂರ್ತಿ ಕೊನೆಯುಸಿರೆಳೆದರು. ಹೀಗೆ ಹಲಸಿನ ಹಣ್ಣು ಬಿದ್ದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.

ABOUT THE AUTHOR

...view details