ಗಜಪತಿ (ಒಡಿಶಾ): ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ ತಲೆಯನ್ನು ಕತ್ತರಿಸಿ ಮನೆಗೆ ತಂದಿರುವ ಘಟನೆ ಒಡಿಶಾದ ಗಜಪತಿ ಜಿಲ್ಲೆಯ ಸಾರಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಊರ್ಮಿಳಾ ಕರ್ಜಿ ಎಂದು ಗುರುತಿಸಲಾಗಿದ್ದು, ಆರೋಪಿ ಚಂದ್ರಶೇಖರ್ ಕರ್ಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಕಾರ, ಗಂಡ ಹೆಂಡತಿ ಇಬ್ಬರು ಬೆಳಗ್ಗೆ ತಮ್ಮ ಕೃಷಿ ಕೆಲಸಕ್ಕಾಗಿ ತಮ್ಮ ಜಮೀನಿಗೆ ತೆರಳಿದ್ದರು. ಬಳಿಕ ಇಬ್ಬರು ನಡುವೆ ಮಾತಿನ ಚಕಮಕಿ ನಡೆದಿದ್ದು, ಚಂದ್ರಶೇಖರ್ ಸಿಟ್ಟಿಗೆದ್ದು ಕೊಡಲಿಯಿಂದ ತಲೆ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅದಾದ ನಂತರ ಪತಿ ಚಂದ್ರಶೇಖರ್. ತನ್ನ ಹೆಂಡತಿಯ ಕತ್ತರಿಸಿದ ತಲೆಯನ್ನು ಜಮೀನಿನಿಂದ ತಂದು ತನ್ನ ಮನೆಯ ಮುಂದೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
4 ವರ್ಷದ ಹಿಂದೆ ಮದುವೆಯಾಗಿದ್ದ ಮೃತ ಊರ್ಮಿಳಾ ಮತ್ತು ಚಂದ್ರಶೇಖರ್ ಅವರ ಎರಡನೇ ಹೆಂಡತಿಯಾಗಿದ್ದು, ಎರಡು ವರ್ಷದ ಮಗುವನ್ನು ಹೊಂದಿದ್ದರು. ಕೆಲ ವರ್ಷಗಳ ಹಿಂದೆ ಚಂದ್ರಶೇಖರ್ನ ಮೊದಲ ಪತ್ನಿ ಹಲ್ಲೆ ಮಾಡುತ್ತಿದ್ದ ಎಂದು ಬಿಟ್ಟು ಹೋಗಿದ್ದರು. ಈ ದುರ್ಘಟನೆ ಬಗ್ಗೆ ಮಾಹಿತಿ ಪಡೆದ ಕಾಶಿನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಚಂದ್ರಶೇಖರ್ ನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸಂಬಂಧಿಯಿಂದಲೇ ಯುವತಿ ಅಪಹರಣ ಯತ್ನ; ಆರೋಪಿ ಪೊಲೀಸ್ ವಶಕ್ಕೆ
ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ:ಇನ್ನೊಂದೆಡೆ ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿ ಗಂಡ ಪರಾರಿಯಾಗಿರುವ ಘಟನೆ ಕಳೆದ ಮಂಗಳವಾರ ಬೆಳಕಿಗೆ ಬಂದಿತ್ತು. ಕೊಲೆಯಾಗಿ 5 ದಿನಗಳ ನಂತರ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾಗಿದ್ದು. ಗೌರಿಬಿದನೂರು ನಗರದ ಗಂಗಾನಗರದ ಮನೆಯಲ್ಲಿ ಮೃತ ಪಟ್ಟ ಮಹಿಳೆಯನ್ನು ಲಕ್ಷ್ಮಿದೇವಮ್ಮ (43) ಎಂದು ಗುರುತಿಸಲಾಗಿತ್ತು.
ಗೌರಿಬಿದನೂರು ತಾಲೂಕಿನ ರಾಮಚಂದ್ರಪುರ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಪ್ಪ ಸುಮಾರು ದಿನಗಳಿಂದ ಪರಾರಿಯಾಗಿದ್ದರು. ಇನ್ನೂ ಕಳೆದ ನಾಲ್ಕು ದಿನಗಳಿಂದ ಮೃತ ಮಹಿಳೆಯ ಮಕ್ಕಳು ತಾಯಿಯನ್ನು ಮಾತನಾಡಲು ಫೋನ್ ಕರೆ ಮಾಡಿದ್ದರು ಕರೆ ಸ್ವೀಕರಿಸದ ಹಿನ್ನೆಲೆ ಮನೆಯ ಬಳಿ ಬಂದು ನೋಡಿದ ವೇಳೆ ತಾಯಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿತ್ತು.
ಮೃತ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರು ಎಂಬ ವಿಚಾರವೂ ಗೊತ್ತಾಗಿತ್ತು. ಈ ಮನೆಯಲ್ಲಿ ನಿತ್ಯವು ಗಂಡ ಹೆಂಡತಿಯ ಜಗಳವಾಡಿಕೊಳ್ಳುತ್ತಿದ್ದರು ಎಂದು ಅಕ್ಕ-ಪಕ್ಕದ ನಿವಾಸಿಗಳು ತಿಳಿಸಿದ್ದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿಎಲ್ ನಾಗೇಶ್ ಭೇಟಿ ನೀಡಿ ಪರಿಶೀಲಿಸಿ, ಗಂಡ ಕೃಷ್ಣಪ್ಪ ಕೊಲೆ ಮಾಡಿ ಪರಾರಿಯಾಗಿರಬಹುದು ಆದರಿಂದ ಈಗಾಗಲೇ ಆರೋಪಿಯ ಪತ್ತೆಗೆ ಸರ್ಕಲ್ ಇನ್ಸ್ಪೆಕ್ಟರ್ ಕೆಪಿ ಸತ್ಯನಾರಾಯಣ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಇದನ್ನೂ ಓದಿ:ಏರ್ಲೈನ್ಸ್ ಮಹಿಳಾ ಸಿಬ್ಬಂದಿಗೆ ಎಲ್ಲೆಲ್ಲೋ ಟಚ್ ಮಾಡಿ ಅಸಭ್ಯ ವರ್ತನೆ.. ಪ್ರಯಾಣಿಕನ ವಿರುದ್ಧ ದೂರು