ಕರ್ನಾಟಕ

karnataka

ETV Bharat / bharat

ಈ ಬೋರ್‌ವೆಲ್‌ನಿಂದ ಒಂದು ಲೋಟ ನೀರು ಪಡೆಯಲಾಗದು! ಜನರಿಂದ ಇಲಾಖೆಗೆ ಛೀಮಾರಿ

ಈ ಕೈಪಂಪು ಆದಿವಾಸಿಗಳ ಪ್ರಾಬಲ್ಯವಿರುವ ಮಧ್ಯಪ್ರದೇಶದ ಕುಕ್ಷಿಯ ಕೊಟ್ಬಾ ಪಂಚಾಯತ್‌ ಎಂಬಲ್ಲಿದ್ದು, ಜನರ ಸಂಕಷ್ಟಕ್ಕೆ ಕನ್ನಡಿ ಹಿಡಿಯುತ್ತಿದೆ. ಈ ಕುರಿತು ಕಾಂಗ್ರೆಸ್‌ ಮುಖಂಡರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ.

ಅವೈಜ್ಞಾನಿಕವಾಗಿ ಕೈಪಂಪು ನಿರ್ಮಾಣ ಮಾಡಿದ ಇಲಾಖೆ
ಅವೈಜ್ಞಾನಿಕವಾಗಿ ಕೈಪಂಪು ನಿರ್ಮಾಣ ಮಾಡಿದ ಇಲಾಖೆ

By

Published : Apr 10, 2022, 4:52 PM IST

ಧಾರ್(ಮಧ್ಯಪ್ರದೇಶ): ಇಲ್ಲಿರುವ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದಂತು ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯಾಸ್ಪದ ವಿಡಿಯೋಗಳು ರಾಜಕೀಯ ನಾಯಕರ ಅಭಿವೃದ್ಧಿ ಕಾರ್ಯಗಳನ್ನು ಅಣಕ ಮಾಡುವಂತಿವೆ. ಆದರೆ, ಅವೆಲ್ಲವನ್ನೂ ಮೀರಿಸುವಂತಿಗೆ ಈ ವಿಡಿಯೋ.

ಸರ್ಕಾರದ ಪಿಎಚ್​ಇ ಇಲಾಖೆ ವಿಚಿತ್ರವಾಗಿ ಹ್ಯಾಂಡ್ ಪಂಪ್​(ಬೋರ್‌ವೆಲ್‌) ನಿರ್ಮಿಸಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಕೈ ಪಂಪ್ ಅಂದ್ರೆ ಸಾಮಾನ್ಯವಾಗಿ ನೆಲದಿಂದ ಒಂದಷ್ಟು ಅಡಿಗಳವರೆಗೆ ಎತ್ತರದಲ್ಲಿರಬೇಕು. ಇದಕ್ಕೆ ಕಾರಣ, ನೀರು ಪೈಪ್ ​ಮೂಲಕ ಹೊರಬಂದಾಗ ಅದನ್ನು ತುಂಬಿಸಿಕೊಳ್ಳಲು ಸ್ವಲ್ಪಮಟ್ಟಿನ ಸ್ಥಳಾವಕಾಶ ಇರಬೇಕು. ಆದರೆ, ಈ ಕೈಪಂಪಿನ ಸ್ಥಳದಲ್ಲಿ ಅದ್ಯಾವುದೂ ಇಲ್ಲ. ಅಷ್ಟೆಲ್ಲಾ ಏಕೆ? ಕೇವಲ ಒಂದು ಲೋಟ ಸಹ ಇಡಲು ಸಾಧ್ಯವಿಲ್ಲದ ಹಾಗಿದೆ.

ಇದನ್ನೂ ಓದಿ:ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ

ಇಂಥ ಕೈಪಂಪು ಇರುವುದು ಆದಿವಾಸಿಗಳ ಪ್ರಾಬಲ್ಯವಿರುವ ಕುಕ್ಷಿಯ ಕೊಟ್ಬಾ ಪಂಚಾಯತ್‌ನಲ್ಲಿ. ಹೀಗಿದ್ದಾಗ ನೀರು ತುಂಬಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರದ್ದು. ಈ ಕುರಿತು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಸುರೇಂದ್ರ ಸಿಂಗ್ ಬಾಘೇಲ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅವರೇ ಹ್ಯಾಂಡ್ ಪಂಪ್‌ನಿಂದ ಗ್ಲಾಸ್​ಗೆ ನೀರು ತುಂಬಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಕಾಂಗ್ರೆಸ್‌ ಶಾಸಕ ಮಾತನಾಡಿ, ಈ ಕೈ ಪಂಪ್​ನಿಂದ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಮಹಿಳೆಯರು ನೀರಿಗಾಗಿ ಹರಸಾಹಸಪಡಬೇಕಾಗಿದೆ. ಕೈಪಂಪು ನೆಲದಿಂದ ಸ್ವಲ್ಪವಷ್ಟೇ ಮೇಲಿದೆ!. ಜನರು ಚಿಕ್ಕ ಪಾತ್ರೆಗಳಲ್ಲಿ ನೀರು ತುಂಬಿಸಿ ನಂತರ ದೊಡ್ಡ ಡಬ್ಬಗಳಲ್ಲಿ ಸುರಿಯುತ್ತಾರೆ. ಈ ಸಮಯದಲ್ಲಿ, ಅರ್ಧದಷ್ಟು ನೀರು ನೆಲದ ಮೇಲೆ ಬೀಳುತ್ತದೆ ಎಂದಿದ್ದಾರೆ.

'ಗಿರಿಜನರಿಗೆ ಅಪಮಾನ':ಈ ಕೆಲಸ ಗಿರಿಜನರಿಗೆ ಮಾಡಿದ ಅವಮಾನ. ಇಲಾಖೆ ಕೇವಲ ಔಪಚಾರಿಕವಾಗಿ ಕೆಲಸ ಮಾಡುತ್ತಿದೆ. ಕೈಪಂಪು ನಿರ್ಮಿಸಿರುವ ರೀತಿ ನೋಡಿದರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿಯೇ ಇಲ್ಲ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪಿಎಚ್‌ಇ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುರೇಂದ್ರ ಸಿಂಗ್ ಆಗ್ರಹಿಸಿದರು.

ABOUT THE AUTHOR

...view details