ಕರ್ನಾಟಕ

karnataka

ETV Bharat / bharat

ಹೀಗೂ ಉಂಟೆ..? ಮುತ್ತಿನ ನಗರಿಯಲ್ಲಿ ಭಯಂಕರ ಬಿಸಿಲು.. ಸ್ಕೂಟರ್ ಮೇಲೆ ಗರಿಗರಿ ದೋಸೆ ಹಾಕಿದ ವ್ಯಕ್ತಿ! - ಹೈದರಾಬಾದ್​ನಲ್ಲಿ ರಣ ಬಿಸಿಲು

ಹೈದರಾಬಾದ್​​ನಲ್ಲಿ ಸೂರ್ಯನ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲ ಧಗೆ ಎಷ್ಟರ ಮಟ್ಟಿಗೆ ಇದೆ ಎಂದರೆ, ವ್ಯಕ್ತಿಯೋರ್ವ ಸ್ಕೂಟರ್ ಮೇಲೆ ದೋಸೆ ಹಾಕಿದ್ದಾನೆ.

Man cooks dosa on scooter
Man cooks dosa on scooter

By

Published : Jun 7, 2022, 4:34 PM IST

ಹೈದರಾಬಾದ್​​(ತೆಲಂಗಾಣ): ಸೂರ್ಯನ ಪ್ರತಾಪಕ್ಕೆ ಮುತ್ತಿನ ನಗರಿ ಹೈದರಾಬಾದ್​ನ ವಿವಿಧ ​ರಸ್ತೆಗಳು ಸುಡುವ ಕಬ್ಬಿಣದಂತಾಗಿವೆ. ಹೀಗಾಗಿ, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದ್ದು, ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿಪರೀತ ಬಿಸಿಲ ಧಗೆ ಎಷ್ಟರ ಮಟ್ಟಿಗೆ ಇದೆ ಎಂದರೆ, ವ್ಯಕ್ತಿಯೋರ್ವ ಸ್ಕೂಟರ್ ಸೀಟಿನ ಮೇಲೆ ದೋಸೆ ಮಾಡಿದ್ದಾನೆ. ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ದೇಶದ ಕೆಲವೊಂದು ನಗರಗಳಲ್ಲಿ ಮಳೆ ಸುರಿಯುತ್ತಿದ್ದರೆ, ಇನ್ನೂ ಕೆಲ ನಗರಗಳಲ್ಲಿ ಸೂರ್ಯನ ತಾಪಮಾನ 44 ಡಿಗ್ರಿ ಗಡಿ ದಾಟಿದೆ. ಮುತ್ತಿನ ನಗರಿ ಹೈದರಾಬಾದ್​​ನಲ್ಲೂ ಸಿಕ್ಕಾಪಟ್ಟೆ ಬಿಸಿಲಿದ್ದು, ಅದನ್ನೇ ಬಳಸಿಕೊಂಡು ದೋಸೆ ಸಹ ಮಾಡಲಾಗ್ತಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ಸ್ಕೂಟರ್ ಸೀಟಿನ ಮೇಲೆ ದೋಸೆ ಹಿಟ್ಟು ಸುರಿದು, ದೋಸೆ ಮಾಡ್ತಿದ್ದಾನೆ. ಕೆಲ ನಿಮಿಷಗಳ ನಂತರ ಅದನ್ನ ತಿರುವಿ ಹಾಕಿದ್ದಾನೆ. ಈ ವೇಳೆ ಅದು ಸುಟ್ಟಿದೆ.

ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ

ಇದನ್ನ ಹರ್ಷಾ ಗೋಯಂಕಾ ಎನ್ನುವವರು ತಮ್ಮ ಟ್ವೀಟರ್​​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅನೇಕರು ತರಹೇವಾರಿ ಟ್ವೀಟ್ ಮಾಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಕೂಡ, ಹೈದರಾಬಾದ್​ನಲ್ಲಿ ರಸ್ತೆ ಮೇಲೆ ಆಮ್ಲೆಟ್​ ಮಾಡಿರುವ ವಿಡಿಯೋ ಸಹ ವೈರಲ್​ ಆಗಿತ್ತು.

ABOUT THE AUTHOR

...view details