ಹೈದರಾಬಾದ್ (ತೆಲಂಗಾಣ):ವ್ಯಕ್ತಿಯೊಬ್ಬ ವಿಡಿಯೋ ಕರೆ ಮಾಡಿ ಮಕ್ಕಳೊಂದಿಗೆ ಮಾತನಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಪೊಸಾನಿಪೇಟೆಯಲ್ಲಿ ನಡೆದಿದೆ.
ಆರ್ಥಿಕ ಸಮಸ್ಯೆಗಳಿಂದಾಗಿ ಲಕ್ಷ್ಮಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಲಕ್ಷ್ಮಣ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಕಾಮರೆಡ್ಡಿಗೆ ಹದಿನೈದು ವರ್ಷಗಳ ಹಿಂದೆ ಉದ್ಯೋಗ ಅರಸಿ ಬಂದಿದ್ದರು. ಐದು ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದು ಅದನ್ನು ಎರಡು ಚೈನ್ ಲಾಟರಿ ಕಂಪನಿಗಳಲ್ಲಿ ವ್ಯಾಪಾರಕ್ಕಾಗಿ ಹೂಡಿಕೆ ಮಾಡಿದ್ದರು.
ಓದಿ:1.75 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳ ಸಾಗಣೆ: ದುಬೈನಿಂದ ಚೆನ್ನೈಗೆ ಆಗಮಿಸಿದ ಐವರ ಬಂಧನ
ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಈ ಕಂಪನಿಗಳು ತೊಂದರೆಯಲ್ಲಿ ಸಿಲುಕಿದ್ದವು. ಪೊಸಾನಿಪೇಟ್‌ಗೆ ಹೋಗುವುದಾಗಿ ಹೇಳಿದ ಲಕ್ಷ್ಮಣ್. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುತ್ತಿಗೆಗೆ ಹಗ್ಗವನ್ನು ಕಟ್ಟಿಕೊಂಡು ವಿಡಿಯೋ ಕರೆ ಮಾಡಿ, ಮಕ್ಕಳೊಂದಿಗೆ ಮಾತನಾಡಿದ್ದಾರೆ. ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳದಂತೆ ಎಷ್ಟೇ ಬೇಡಿಕೊಂಡರು ಮಾತು ಕೇಳದೇ ಸಾವಿಗೆ ಶರಣಾಗಿದ್ದಾನೆ.