ಸುರ್ಗುಜಾ(ಛತ್ತೀಸ್‌ಗಢ): ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನಕಲುಕುವ ವಿಡಿಯೋವೊಂದು ವೈರಲ್ ಆಗ್ತಿದೆ. ಇದರಲ್ಲಿ ತಂದೆಯೊಬ್ಬ ತನ್ನ ಮಗಳ ಮೃತ ದೇಹವನ್ನು ಹೊತ್ತು ಸಾಗುತ್ತಿದ್ದರು. ಈ ಘಟನೆಯ ನಿಖರತೆ ತಿಳಿಯಲು ಆರೋಗ್ಯ ಸಚಿವ ಟಿ ಎಸ್ ಸಿಂಗ್ ಡಿಯೊ ತನಿಖೆಗೆ ಆದೇಶಿಸಿದ್ದಾರೆ.
ಮೃತ ಮಗಳ ದೇಹವನ್ನು 10 ಕಿ.ಮೀ ಹೊತ್ತು ಸಾಗಿದ ತಂದೆ ಏನಿದು ಘಟನೆ: ಅಮದಾಳ ಗ್ರಾಮದವರಾದ ಈಶ್ವರ ದಾಸ್ ಮಗಳು ಸುರೇಖಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಶುಕ್ರವಾರ ಬೆಳಗ್ಗೆ ಲಖನಪುರ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ, ಬಾಲಕಿಯ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.
ಆಕೆ ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಅಗತ್ಯ ಚಿಕಿತ್ಸೆ ನೀಡಲು ಪ್ರಾರಂಭಿಸಲಾಯಿತು. ಆದರೆ, ಆಕೆಯ ಸ್ಥಿತಿ ತುಂಬಾ ಹದಗೆಟ್ಟಿತು. ಚಿಕಿತ್ಸೆ ಫಲಿಸದೇ ಬೆಳಗ್ಗೆ 7:30 ರ ಸುಮಾರಿಗೆ ಸುರೇಖಾ ಸಾವನ್ನಪ್ಪಿದ್ದಳು. ಶೀಘ್ರದಲ್ಲೇ ಶವ ವಾಹನ ಬರಲಿದೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದೀವಿ. 9:20 ರ ಸುಮಾರಿಗೆ ವಾಹನ ಬಂದಿತು. ಅಷ್ಟೋತ್ತಿಗಾಗಲೇ ಅವರು ತಮ್ಮ ಮೃತ ಮಗಳ ದೇಹದೊಂದಿಗೆ ಹೊರಟು ಹೋಗಿದ್ದರು ಎಂದು ಆರೋಗ್ಯ ಕೇಂದ್ರದ ವೈದ್ಯರಾದ (ಆರ್‌ಎಂಎ) ಡಾ ವಿನೋದ್ ಭಾರ್ಗವ್ ಹೇಳಿದರು.
ಓದಿ:ರಣನೀತಿಯನ್ನೇ ಬದಲಾಯಿಸಿತೇ ರಷ್ಯಾ?: ಪುಟಿನ್ ಮುಂದಿನ ನಡೆ ಏನು?
ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ತಂದೆಯೊಬ್ಬ ತಮ್ಮ ಮಗಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಆ ತಂದೆ ತನ್ನ ಮಗಳ ಶವ ಹೊತ್ತುಕೊಂಡು ಅಮದಾಳದಲ್ಲಿರುವ ತಮ್ಮ ಮನೆ ತಲುಪಲು ಕಾಲ್ನಡಿಗೆಯಲ್ಲಿ ಸುಮಾರು 10 ಕಿ.ಮೀ ದೂರ ಕ್ರಮಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರೋಗ್ಯ ಸಚಿವ ಸಿಂಗ್ ಡಿಯೋ ಅವರ ಗಮನಕ್ಕೆ ಬಂದಿದ್ದು, ಈ ಘಟನೆ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಸಚಿವರು ಸೂಚಿಸಿದ್ದಾರೆ. ನಾನು ವಿಡಿಯೋವನ್ನು ನೋಡಿದೆ. ಇದು ಗೊಂದಲದ ಸಂಗತಿಯಾಯಿತು.
ನಾನು ಈ ವಿಷಯವನ್ನು ತನಿಖೆ ಮಾಡಿದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿಎಂಎಚ್‌ಒಗೆ ಹೇಳಿದ್ದೇನೆ. ಅಲ್ಲಿನ ವೈದ್ಯರಿಗೆ ಮತ್ತು ಸಿಬ್ಬಂದಿಯರಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ತೆಗೆದುಹಾಕಬೇಕು ಎಂದು ನಾನು ಅವರಿಗೆ ಸೂಚಿಸಿದ್ದೇನೆ. ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿ ಕುಟುಂಬವನ್ನು ವಾಹನಕ್ಕಾಗಿ ಕಾಯುವಂತೆ ಮನವೊಲಿಸಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ ಅಂತಾ ಸಚಿವರು ಹೇಳಿದರು.