ಶಹದೋಲ್(ಮಧ್ಯಪ್ರದೇಶ): ಯುವಕನೋರ್ವ 80 ಕಿಲೋ ಮೀಟರ್ ದೂರ ಬೈಕ್‌ನ ಹಿಂಬದಿ ಸೀಟಿನಲ್ಲಿ ತಾಯಿಯ ಮೃತದೇಹವನ್ನು ಸಾಗಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮೃತದೇಹವನ್ನು ತನ್ನ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ಹಾಗೂ ಇತರೆ ಖಾಸಗಿ ವಾಹನ ಚಾಲಕರು 5 ಸಾವಿರ ರೂಪಾಯಿ ಕೇಳಿದ್ದಾರೆ. ಇಷ್ಟೊಂದು ಹಣ ತನ್ನ ಬಳಿ ಇಲ್ಲದ ಕಾರಣ ಯುವಕ ಕೊನೆಗೆ ಬೈಕ್‌ನಲ್ಲೇ ಮೃತದೇಹವನ್ನಿಟ್ಟು ಗ್ರಾಮಕ್ಕೆ ಸಾಗಿಸಿದ ಎಂದು ತಿಳಿದುಬಂದಿದೆ.
ಬೈಕ್ ಹಿಂಬದಿಯಲ್ಲಿ ತಾಯಿಯ ಮೃತದೇಹವಿಟ್ಟು 80 ಕಿಲೋ ಮೀಟರ್ ಸಾಗಿಸಿದ ಪುತ್ರ - ಈಟಿವಿ ಭಾರತ ಕನ್ನಡ
ದೇಶದ ಹಲವೆಡೆ ಕನಿಷ್ಠ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಜನರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ತಾಯಿಯ ಮೃತದೇಹವನ್ನು ಸಾಗಿಸಲು ಅನುಭವಿಸುತ್ತಿರುವ ಸಂಕಷ್ಟ ಎಂಥವರ ಕಣ್ಣಾಲಿಗಳನ್ನೂ ತೇವಗೊಳಿಸಬಲ್ಲದು.
ಅನುಪ್ಪುರ್ ಜಿಲ್ಲೆಯ ಗೋದಾರು ಗ್ರಾಮದ ಬುಡಕಟ್ಟು ಮಹಿಳೆ ಜೈಮಂತ್ರಿ ಯಾದವ್ ಎದೆನೋವಿನಿಂದ ಬಳಲುತ್ತಿದ್ದರು. ಮಹಿಳೆಯನ್ನು ಶಹದೋಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆಂಬ್ಯುಲೆನ್ಸ್ ಮತ್ತು ಇತರೆ ವಾಹನ ಚಾಲಕರು ಮೃತದೇಹವನ್ನು ಸಾಗಿಸಲು 5 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣ ತನ್ನಲ್ಲಿದ್ದ ಕಾರಣಕ್ಕೆ ಯುವಕ 100 ರೂಪಾಯಿ ಕೊಟ್ಟು ಮರದ ಚಪ್ಪಡಿ ಖರೀದಿಸಿದ್ದಾನೆ. ಈ ಚಪ್ಪಡಿಯನ್ನು ಬೈಕಿನ ಹಿಂಬದಿಯಲ್ಲಿಟ್ಟು ಅದರ ಮೇಲೆ ತಾಯಿಯ ಮೃತದೇಹವನ್ನು ಮಲಗಿಸಿ, ಬಟ್ಟೆ ಹೊದಿಸಿ, ತೆಗೆದುಕೊಂಡು ಹೋಗಿದ್ದಾನೆ.
ಇದನ್ನೂ ಓದಿ:ಮಗಳ ಮೃತದೇಹ 10 ಕಿ.ಮೀ ಹೊತ್ತು ಸಾಗಿದ ತಂದೆ.. ಕುಟುಂಬದವರನ್ನ ಮನವೊಲಿಸಬೇಕಾಗಿತ್ತೆಂದ ಸಚಿವ!