ನಾಶಿಕ್(ಮಹಾರಾಷ್ಟ್ರ): ಮಹಾರಾಷ್ಟ್ರ ನಾಶಿಕ್ನ ಮಸ್ರುಲ್ ಶಿವ್ರ (Mhasrul Shivra)ದಲ್ಲಿರುವ ಗುರುಕುಲವೊಂದರ ಆಧಾರ್ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯರು ಆಶ್ರಮದ ಉಸ್ತುವಾರಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಮಸ್ರುಲ್ ಪೊಲೀಸರು ತಿಳಿಸಿದ್ದಾರೆ. ಆಶ್ರಮದ 14 ವರ್ಷದ ಬಾಲಕಿ ತನ್ನ ಮೇಲೆ ಆಪರೇಟರ್ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಈಕೆಯ ಹೇಳಿಕೆಯಂತೆ ಪೊಲೀಸರು ಆಶ್ರಮದ ಇತರೆ ಹುಡುಗಿಯರ ಹೇಳಿಕೆಯನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ ಕಿರಣ್ ಕುಮಾರ್ ಚವಾಣ್, ಶಂಕಿತ ಹರ್ಷಲ್ ಮೋರೆ ಅಲಿಯಾಸ್ ಸೋನು ಅವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.