ಕರ್ನಾಟಕ

karnataka

ETV Bharat / bharat

'ಡೋಲಿ'ಯೇ ಆ್ಯಂಬುಲೆನ್ಸ್: ಹಾವು ಕಚ್ಚಿದ ವ್ಯಕ್ತಿಯನ್ನು 6 ಕಿ.ಮೀ. ಹೊತ್ತೊಯ್ದ ಯುವಕರು

ಹಾವು ಕಚ್ಚಿದ ವ್ಯಕ್ತಿಯೊಬ್ಬರನ್ನು ಆರು ಕಿಲೋ ಮೀಟರ್​ ವರೆಗೆ ಡೋಲಿಯಲ್ಲಿ ಹೊತ್ತುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ ಘಟನೆ ಆಂಧ್ರದಲ್ಲಿ ನಡೆದಿದೆ.

Man bitten by snake was carried through Doli for treatment for 6 kilometers
ಹಾವು ಕಚ್ಚಿದ ವ್ಯಕ್ತಿಯನ್ನು 6 ಕಿ.ಮೀ. ಹೊತ್ತೊಯ್ದ ಯುವಕರು

By

Published : May 27, 2022, 5:29 PM IST

ಆಂಧ್ರಪ್ರದೇಶ:ಹಾವು ಕಡಿತದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನನ್ನು ಡೋಲಿ ಮೂಲಕ 6 ಕಿ.ಮೀ ಹೊತ್ತೊಯ್ದ ಘಟನೆ ಜಿಲ್ಲೆಯ ಅಲ್ಲೂರಿ ಸೀತಾರಾಮರಾಜುನಲ್ಲಿ ನಡೆದಿದೆ. ಪಾಡೇರು ಮಂಡಲದ ಸಲುಗು ಪಂಚಾಯಿತಿಯ ದಬ್ಬಗರುವು ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದೆ. ಆಸ್ಪತ್ರೆಗೆ ಕೊಂಡೊಯ್ಯಲು 6 ಕಿ.ಮೀ.ವರೆಗೆ ರಸ್ತೆ ಇಲ್ಲದ ಕಾರಣ ಡೋಲಿಯಲ್ಲಿ ಯುವಕನನ್ನು ಹೊತ್ತೊಯ್ಯಲಾಗಿದೆ.

ಹಾವು ಕಚ್ಚಿದ ವ್ಯಕ್ತಿಯನ್ನು 6 ಕಿ.ಮೀ. ಹೊತ್ತೊಯ್ದ ಯುವಕರು

ಸ್ಥಳೀಯ ಯುವಕರು ಡೋಲಿ ಕಟ್ಟಿಕೊಂಡು ಸೆಲ್ ಫೋನ್ ಲೈಟ್ ಸಹಾಯದಿಂದ ಸಂತ್ರಸ್ತನನ್ನು ಕಷ್ಟಪಟ್ಟು ಬೆಟ್ಟದಿಂದ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಗ್ರಾಮಕ್ಕೆ ರಸ್ತೆ ಮಾರ್ಗ ಇಲ್ಲದಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿಯೂ ಆ್ಯಂಬುಲೆನ್ಸ್ ಗ್ರಾಮಕ್ಕೆ ಬರುವುದಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಸ್ಪಂದಿಸಿ ರಸ್ತೆ ಮಾಡುವಂತೆ ಕೋರಿದ್ದಾರೆ.

ಇದನ್ನೂ ಓದಿ:ಅಂತರ್‌ಧರ್ಮೀಯ ವಿವಾಹ : ವಿಡಿಯೋ ವೈರಲ್ ಮಾಡಿ ರಕ್ಷಣೆಗೆ ಮೊರೆಯಿಟ್ಟ ಯುವತಿ!


For All Latest Updates

ABOUT THE AUTHOR

...view details