ಕರ್ನಾಟಕ

karnataka

ETV Bharat / bharat

ಪತ್ನಿ ಜೊತೆ ಸಂಬಂಧ ಶಂಕೆ: ವ್ಯಕ್ತಿಯ ಶಿರಚ್ಛೇದ... ಕತ್ತರಿಸಿದ ತಲೆ ಹಿಡಿದು ಪತ್ನಿಯ ತವರು ಮನೆಗೆ ಬಂದ ಪತಿ! - ತಮಿಳುನಾಡು ಹತ್ಯೆ ಪ್ರಕರಣ

ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇರೆಗೆ ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಿದ್ದಲ್ಲದೇ, ಕಡಿದ ತಲೆಯ ಜೊತೆ ಪತ್ನಿಯ ತವರು ಮನೆಗೆ ಪತಿ ಬಂದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ
ಚೆನ್ನೈ

By ETV Bharat Karnataka Team

Published : Sep 23, 2023, 10:34 AM IST

ಚೆನ್ನೈ(ತಮಿಳುನಾಡು):ಪತಿಯೊಬ್ಬತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದ ಮೇರೆಗೆ ವ್ಯಕ್ತಿಯೋರ್ವನ ಶಿರಚ್ಛೇದ ಮಾಡಿರುವ ಆಘಾತಕಾರಿ ಘಟನೆ ಗುರುವಾರ ಸಂಜೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ. ಶಿರಚ್ಛೇದ ಮಾಡಿದ್ದಲ್ಲದೇ ಕತ್ತರಿಸಿದ ತಲೆಯನ್ನು ಟುಟಿಕೋರಿನ್​ ಜಿಲ್ಲೆಯಲ್ಲಿರುವ ಪತ್ನಿಯ ತವರು ಮನೆ ಮುಂದೆ ಇಟ್ಟಿದ್ದ. ಕೃತ್ಯ ಎಸಗಿದ ಎಸ್.ವೇಲುಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಮುರುಗನ್ ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ: ಆಲಂಕುಳಂ ಸಮೀಪದ ರೆಡಿಯಾರಪಟ್ಟಿ ಗಿಮ್ಕುಳಂ ಗ್ರಾಮಕ್ಕೆ ಸೇರಿದ ಆರೋಪಿ ವೇಲುಸಾಮಿಯು ತೂತುಕುಡಿ ಜಿಲ್ಲೆಯ ರಾಜಪುತುಕುಡಿಯ ಮಹಿಳೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ಮಕ್ಕಳಿರಲಿಲ್ಲ. ಈತನ ಪತ್ನಿಗೆ ಅದೇ ಗ್ರಾಮದ ಮುರುಗನ್ ಪರಿಚಯವಾಗಿದೆ. ಈ ಪರಿಚಯ ಸಂಬಂಧವಾಗಿ ಮಾರ್ಪಟ್ಟಿತ್ತಂತೆ. ಈ ವಿಚಾರ ತಿಳಿದ ವೇಲುಸಾಮಿ ತನ್ನ ಪತ್ನಿಯನ್ನು ಕರೆದುಕೊಂಡು ಗ್ರಾಮವನ್ನು ತೊರೆದು ಕಯತಾರ್ ಭಾರತಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದನು.

ಆದರೂ ಪತ್ನಿಯ ನಡುವಳಿಕೆಯ ಮೇಲೆ ವೇಲುಸಾಮಿಗೆ ಅನುಮಾನವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಕಳೆದ ಕೆಲವು ತಿಂಗಳ ಹಿಂದೆ ಪತಿಯಿಂದ ಬೇರ್ಪಟ್ಟು ಗಾಯತಾರು ಸಮೀಪದ ರಜಪುತುಕುಡಿ ಗ್ರಾಮದ ತನ್ನ ತಾಯಿಯ ಮನೆಗೆ ತೆರಳಿದ್ದಳು.

ಪತ್ನಿಯ ಅಗಲುವಿಕೆಯಿಂದ ಹತಾಶನಾದ ವೇಲುಸಾಮಿ ಇದಕ್ಕೆ ಕಾರಣವಾದ ಮುರುಗನ್ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಅಂತೆಯೇ ಸ್ಕೆಚ್ ಹಾಕಿ ವೇಲುಸಾಮಿ ಕಯತಾರ್​ನಿಂದ ಬೈಕ್​ನಲ್ಲಿ ಘಿಂಕುಲಂಗೆ ಬಂದಿದ್ದಾನೆ. ಈ ವೇಳೆ ಮುರುಗನ್​ ಗದ್ದೆಯಲ್ಲಿ ಹಸುವನ್ನು ಮೇಯಿಸಿಕೊಂಡಿದ್ದ. ಅಲ್ಲಿಗೆ ತೆರಳಿದ ವೇಲುಸ್ವಾಮಿ, ಕುಡುಗೋಲಿನಿಂದ ಮುರುಗನ್​ಶಿರಚ್ಛೇದ ಮಾಡಿದ್ದಾನೆ.

ನಂತರ ಆತ ಕತ್ತರಿಸಿದ ಮುರುಗನ್​ನ ತಲೆಯೊಂದಿಗೆ ಪತ್ನಿಯ ತವರು ಮನೆಗೆ ತೆರಳಿ, ಅದನ್ನು ಮನೆಯ ಮುಂದೆ ಇರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಊತುಮಲೈ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ವೇಲುಸಾಮಿಯನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಕೋಲಾರದಲ್ಲಿ ಪ್ರೀತಿ ಒಪ್ಪದಕ್ಕೆ ಬ್ಲೇಡ್​ನಿಂದ ಹಲ್ಲೆ:ಪ್ರೀತಿಸಲು ನಿರಾಕರಿಸಿದ ಹಿನ್ನೆಲೆ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿದ್ಯಾರ್ಥಿನಿ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿರುವ ಘಟನೆ ಕೋಲಾರದ ಕೆಜಿಎಫ್​ನ ಚಾಂಪಿಯನ್ ರೀಫ್ ನಗರದಲ್ಲಿರುವ ಖಾಸಗಿ ಕಾಲೇಜು ಕ್ಯಾಂಪಸ್​ನಲ್ಲಿ ನಡೆದಿತ್ತು. ದ್ವಿತೀಯ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿರುವ ಪ್ರೀತಮ್ ಪ್ರಭು ಎಂಬ ಯುವಕ, ಪ್ರಥಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ.

ಅದರಂತೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಒತ್ತಾಯಿಸಿದ್ದ. ಆದರೆ ವಿದ್ಯಾರ್ಥಿನಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಯುವಕ ವಿದ್ಯಾರ್ಥಿನಿಯ ಕುತ್ತಿಗೆಗೆ ಬ್ಲೇಡ್​ನಿಂದ ಇರಿದಿದ್ದ. ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಹಲ್ಲೆಗೊಳಗಾಗಿರುವ ವಿದ್ಯಾರ್ಥಿನಿ ಮೂಲತಃ ಬೆಂಗಳೂರಿನವಳಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಕೆಜಿಎಫ್​ನಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ನೆಲೆಸಿದ್ದಳು. ಘಟನಾ ಸ್ಥಳಕ್ಕೆ ಉರಿಗಾಂ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ತಡರಾತ್ರಿ ಪಾರ್ಟಿ ವೇಳೆ ಗುಂಡೇಟಿಗೆ ವಿದ್ಯಾರ್ಥಿನಿ ಬಲಿ: ಸ್ನೇಹಿತನ ಬಂಧನ

ABOUT THE AUTHOR

...view details