ಕರ್ನಾಟಕ

karnataka

ETV Bharat / bharat

ಇದೆಂಥ ವಿಕೃತಿ..! ಮಹಿಳೆಯ ಕೂದಲು ಹಿಡಿದು ಎಳೆದೊಯ್ದ ಯುವಕರು - ವಿಡಿಯೋ ವೈರಲ್ - ಮಹಿಳೆಯ ಕೂದಲು ಹಿಡಿದು ಎಳೆದೊಯ್ದ ಯುವಕರ ವಿಡಿಯೋ ವೈರಲ್

ಬಿಹಾರದಲ್ಲಿ ಇಬ್ಬರು ಯುವಕರು ಮಹಿಳೆಯ ಕೂದಲು ಹಿಡಿದು ಎಳೆದೊಯ್ದ ವಿಡಿಯೋವೊಂದು ವೈರಲ್​ ಆಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಎಸ್ಪಿ ಆದೇಶ ನೀಡಿದ್ದಾರೆ.

Man beats Woman in motihari video viral
ಮಹಿಳೆಯ ಕೂದಲು ಹಿಡಿದು ಎಳೆದೊಯ್ದ ಯುವಕರು

By

Published : Feb 7, 2021, 10:51 AM IST

ಮೋತಿಹಾರಿ: ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಎಸ್ಪಿ ಪೊಲೀಸರಿಗೆ ಸೂಚಿಸಿದ್ದಾರೆ.

ಮಹಿಳೆಯ ಕೂದಲು ಹಿಡಿದು ಎಳೆದೊಯ್ದ ಯುವಕರು

ಇಬ್ಬರು ಯುವಕರು ಮಹಿಳೆಯ ಕೂದಲನ್ನು ಹಿಡಿದು, ನಡು ರಸ್ತೆಯಲ್ಲೇ ಅಮಾನವೀಯವಾಗಿ ಎಳೆದೊಯ್ಯುವ ವಿಡಿಯೋ ಇದಾಗಿದೆ. ತನ್ನನ್ನು ರಕ್ಷಿಸುವಂತೆ ಮಹಿಳೆ ಕೇಳಿಕೊಂಡರು ಸಹ ಸುತ್ತಲೂ ನಿಂತಿದ್ದ ಜನ ಮಾತ್ರ ಮೂಕಪ್ರೇಕ್ಷಕರಾಗಿದ್ದರು.

ಇದನ್ನೂ ಓದಿ:ರೈತರ ಪ್ರತಿಭಟನೆಗೆ ಬೆಂಬಲ: ಫೆ.12,13 ರಂದು ರಾಜಸ್ಥಾನಕ್ಕೆ ರಾಹುಲ್​

ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ಪುರ ಪಂಚಾಯತ್​ನ ಆಜಾದ್ ನಗರ ಗ್ರಾಮದಿಂದ ಈ ಘಟನೆ ವರದಿಯಾಗಿದೆ. ಆದರೆ, ವೈರಲ್ ವಿಡಿಯೋ ಬಗ್ಗೆ ತಿಳಿದುಕೊಂಡ ಎಸ್ಪಿ ನವೀನ್ ಚಂದ್ರ ಝಾ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಸರಿಯಾ ಪೊಲೀಸ್ ಠಾಣೆ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಈ ಘಟನೆ ವೇಳೆ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details