ಗ್ವಾಲಿಯರ್(ಮಧ್ಯಪ್ರದೇಶ):ತಂಬಾಕು ಖರೀದಿಸಿದ ನಂತರ ಹಣ ನೀಡಲು ನಿರಾಕರಿಸಿದ ಯುವಕನನ್ನು ಕೊಲೆ ಮಾಡಿರುವ ಘಟನೆ ಗ್ವಾಲಿಯರ್ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಗರದ ಕೆಂಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮೃತನನ್ನು ಸುಭಾಷ್ ಶಾಕ್ಯಾ ಎಂದು ಗುರುತಿಸಲಾಗಿದೆ.
ತಂಬಾಕಿಗೆ ಹಣ ನೀಡಲು ನಿರಾಕರಿಸಿದಾಗ ಶಾಕ್ಯಾ ಮತ್ತು ಅಂಗಡಿಯ ಮಾಲೀಕರ ನಡುವೆ ಜಗಳ ನಡೆದಿದೆ. ಅಂಗಡಿ ಮಾಲೀಕನಿಗೆ ಹಣ ನೀಡದೆ ಸುಭಾಷ್ ತಂಬಾಕು ಪ್ಯಾಕೆಟ್ನೊಂದಿಗೆ ಪರಾರಿಯಾಗಲು ಪ್ರಯತ್ನಿಸಿದರು. ಅಂಗಡಿ ಮಾಲೀಕ ಕರಣ್ ಯಾದವ್ ಮತ್ತು ಅವರ ಮಗ ಸಚಿನ್ ಯಾದವ್ ಆತನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ.