ಜಬಲ್ಪುರ್ (ಮಧ್ಯಪ್ರದೇಶ): ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಹೇರಿದ ಬಳಿಕವೂ ಜನ ಎಚ್ಚತ್ತುಕೊಳ್ಳದೇ ಓಡಾಡುವುದು ವರದಿಯಾಗುತ್ತಿದೆ. ಈ ನಡುವೆ ಜನತೆಯಲ್ಲಿ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಯಮರಾಜನ ವೇಷ ಧರಿಸಿ ವ್ಯಕ್ತಿಯೊಬ್ಬ ರಸ್ತೆಗಿಳಿದಿದ್ದಾನೆ.
ಕೊರೊನಾ ಜಾಗೃತಿಗಾಗಿ ಭೂ ಲೋಕಕ್ಕೆ ಬಂದ ಯಮರಾಜ.. ರಸ್ತೆಯುದ್ದಕ್ಕೂ ನಾಟಕ ಪ್ರದರ್ಶನ - ಕಮಲೇಶ್ ಎಂಬ ಕಲಾವಿದ
ಕಮಲೇಶ್ ಎಂಬ ಕಲಾವಿದ ಇಲ್ಲಿನ ಜಬಲ್ಪುರದ ಪೊಲೀಸರ ಸಹಯೋಗದೊಂದಿಗೆ ನಾಟಕ ಪ್ರದರ್ಶನದಲ್ಲಿ ನಿರತರಾಗಿದ್ದಾರೆ. ತೆರೆದ ವಾಹನದ್ ಮೂಲಕ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ.
![ಕೊರೊನಾ ಜಾಗೃತಿಗಾಗಿ ಭೂ ಲೋಕಕ್ಕೆ ಬಂದ ಯಮರಾಜ.. ರಸ್ತೆಯುದ್ದಕ್ಕೂ ನಾಟಕ ಪ್ರದರ್ಶನ ಕೊರೊನಾ ಜಾಗೃತಿಗಳಿಗೆ ಯಮರಾಜ](https://etvbharatimages.akamaized.net/etvbharat/prod-images/768-512-11750549-thumbnail-3x2-mp.jpg)
ಕೊರೊನಾ ಜಾಗೃತಿಗಳಿಗೆ ಯಮರಾಜ
ಕೊರೊನಾ ಜಾಗೃತಿಗಳಿಗೆ ಯಮರಾಜ
ನುಕ್ಕಾಡ್ ಎಂಬ ನಾಟಕವನ್ನು ರಸ್ತೆಯ ಮೇಲೆ ಪ್ರದರ್ಶಿಸುವ ಮೂಲಕ ಯಮರಾಜನ ಪಾತ್ರದಾರಿ ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ. ಕಮಲೇಶ್ ಎಂಬ ಕಲಾವಿದ ಇಲ್ಲಿನ ಜಬಲ್ಪುರದ ಪೊಲೀಸರ ಸಹಯೋಗದೊಂದಿಗೆ ನಾಟಕ ಪ್ರದರ್ಶನದಲ್ಲಿ ನಿರತರಾಗಿದ್ದಾರೆ. ತೆರೆದ ವಾಹನದ ಮೂಲಕ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ಆದರೆ, ಕಳೆದ ಮಾರ್ಚ್ 6ರಂದು ಕಮಲೇಶ್ಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಈಗ ಅವರು ಹೋಮ್ ಐಸೋಲೇಷನ್ಗೆ ಒಳಗಾಗಿದ್ದಾರೆ.